ವಿಶ್ವದ ನಂ.1 ಆಟಗಾರ ಶ್ರೀಕಾಂತ್ಗೆ ಸೋಲು, ಬೆಳ್ಳಿಗೆ ತೃಪ್ತಿ
ಗೋಲ್ಡ್ಕೋಸ್ಟ್, ಎ.15: ಇತ್ತೀಚೆಗಷ್ಟೇ ವಿಶ್ವದ ನಂ.1 ಕಿರೀಟ ಧರಿಸಿರುವ ಕೆ. ಶ್ರೀಕಾಂತ್ ಕಾಮನ್ವೆಲ್ತ್ ಗೇಮ್ಸ್ನ ಪುರುಷರ ಸಿಂಗಲ್ಸ್ನ ಫೈನಲ್ನಲ್ಲಿ ಮಾಜಿ ವಿಶ್ವದ ನಂ.1 ಆಟಗಾರ ಚೊಂಗ್ ಲೀ ವೀಗೆ ಶರಣಾಗಿದ್ದಾರೆ. ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಮಲೇಷ್ಯಾದ ದಂತಕತೆ ಚೊಂಗ್ ವೀ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಮೂರನೇ ಬಾರಿ ಚಿನ್ನದ ಪದಕ ಜಯಿಸಿದ್ದಾರೆ. ಆರಂಭದಲ್ಲೇ ಪ್ರಾಬಲ್ಯ ಮೆರೆದ ಚೊಂಗ್ ಭಾರತದ ಶಟ್ಲರ್ ವಿರುದ್ಧ 19-21, 21-14, 21-14 ಗೇಮ್ಗಳಿಂದ ಜಯ ಸಾಧಿಸಿದರು.
ಗೇಮ್ಸ್ನ ಮಿಶ್ರ ವಿಭಾಗದಲ್ಲಿ ಮಲೇಷ್ಯಾದ ಚೊಂಗ್ ವಿರುದ್ಧ ಸಿಂಗಲ್ಸ್ ಪಂದ್ಯವನ್ನು ಗೆದ್ದುಕೊಂಡಿದ್ದ ಶ್ರೀಕಾಂತ್ ಮೊದಲ ಸೆಟ್ಟನ್ನು ಕೇವಲ 25 ನಿಮಿಷಗಳಲ್ಲಿ 21-19 ರಿಂದ ಗೆದ್ದುಕೊಂಡು ಉತ್ತಮ ಆರಂಭ ಪಡೆದಿದ್ದರು. ಚೊಂಗ್ ಎರಡನೇ ಹಾಗೂ ಮೂರನೇ ಗೇಮ್ನಲ್ಲಿ ಉತ್ತಮ ಪ್ರದರ್ಶನ ನೀಡಿ ತಿರುಗೇಟು ನೀಡಿದರು.
Next Story