ಬೌಲ್ಟ್ ಪಡೆದ ಕ್ಯಾಚ್ ಐಪಿಎಲ್ ಇತಿಹಾಸದಲ್ಲೇ ಅಪೂರ್ವ!
ಬೆಂಗಳೂರು, ಎ.22: ಡೆಲ್ಲಿ ಡೇರ್ಡೆವಿಲ್ಸ್ನ ವೇಗಿ ಟ್ರೆಂಟ್ ಬೌಲ್ಟ್ ಶನಿವಾರ ನಡೆದ ಐಪಿಎಲ್ ಟ್ವೆಂಟಿ-20 ಪಂದ್ಯದಲ್ಲಿ ಪಡೆದಿರುವ ಕ್ಯಾಚ್ ಐಪಿಎಲ್ ಇತಿಹಾಸದಲ್ಲೇ ಅಪೂರ್ವ ಕ್ಯಾಚ್ ಎನಿಸಿಕೊಂಡಿದೆ.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೌಲ್ಟ್ ಕ್ಯಾಚ್ ಪಡೆಯುವುದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಪೆವಿಲಿಯನ್ ಸೇರಿದ್ದರು.
11ನೇ ಓವರ್ನಲ್ಲಿ ಹರ್ಷಲ್ ಪಟೇಲ್ರ ಫುಲ್ಟಾಸ್ ಎಸೆತವನ್ನು ಕೊಹ್ಲಿ ಬೌಂಡರಿಗಟ್ಟುವ ಪ್ರಯತ್ನ ನಡೆಸಿದ್ದರು. ಆದರೆ ಬೌಂಡರಿ ಲೈನ್ ಬಳಿ ಬೌಲ್ಟ್ ಕ್ಯಾಚ್ ತೆಗೆದುಕೊಳ್ಳಲು ಪ್ರಯತ್ನಿಸಿದರು. ಚೆಂಡು ಬೌಂಡರಿ ಗೆರೆ ಮುಟ್ಟಲು 2 ಇಂಚು ದೂರ ಬಾಕಿ ಇದ್ದಾಗ ಬೌಲ್ಟ್ ಕೈ ಸೇರಿತ್ತು. ಇದರೊಂದಿಗೆ ಬೌಲ್ಟ್ ತನ್ನ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದ್ದರು.
ಬೌಲ್ಟ್ ಪಡೆದ ಅಪೂರ್ವ ಕ್ಯಾಚ್ ಕೊಹ್ಲಿ (30) ಅವರಿಗೆ ಪೆವಿಲಿಯನ್ ದಾರಿ ತೋರಿಸಿತು.
ಬೌಲ್ಟ್ ಕ್ಯಾಚ್ ಪಡೆದರೂ ಅವರ ತಂಡಕ್ಕೆ ಸೋಲು ತಪ್ಪಲಿಲ್ಲ. ಆರ್ಸಿಬಿ ಗೆಲುವು ದಾಖಲಿಸಿತು.
"Don't really feel bad getting out to a catch like that"Virat Kohli on Trent Boult stunner.#ViratKohli#TrentBoult catch#IPL2018 pic.twitter.com/mv26V4Dcvm
— బేతళుడు (@bhethaludu) April 22, 2018