ಲಂಡನ್ ಮ್ಯಾರಥಾನ್ ರನ್ನರ್ ನಿಧನ
ಲಂಡನ್, ಎ.23: ಲಂಡನ್ ಮ್ಯಾರಥಾನ್ ರನ್ನರ್ ಮ್ಯಾಟ್ ಕ್ಯಾಂಪ್ಬೆಲ್ (29) ಮ್ಯಾರಥಾನ್ನಲ್ಲಿ ಓಡುತ್ತಿರುವಾಗಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ.
ಕ್ಯಾಂಪ್ಬೆಲ್ ಅವರು ತಂದೆಯ ಸ್ಮರಣಾರ್ಥ ಆಯೋಜಿಸಲಾದ ಲಂಡನ್ ಮ್ಯಾರಥಾನ್ ಓಟದಲ್ಲಿ ಭಾಗವಹಿಸಿದ್ದರು. ಆದರೆ 22.5 ಮೀಟರ್ ದೂರ ಕ್ರಮಿಸಿದಾಗ ಅವರು ಕುಸಿದು ಬಿದ್ದರು ಎನ್ನಲಾಗಿದೆ.
ಕೂಡಲೇ ಕ್ಯಾಂಪ್ಬೆಲ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಫಲಕಾರಿಯಾಗಲಿಲ್ಲ. ಕ್ಯಾಂಪ್ಬೆಲ್ ಮೃತಪಟ್ಟಿರುವುದಾಗಿ ವೈದ್ಯರು ಪ್ರಕಟಿಸಿದರು.
ಕ್ಯಾಂಪ್ಬೆಲ್ ತನ್ನ ತಂದೆಯ ಸ್ಮರಣಾರ್ಥವಾಗಿ ಆಯೋಜಿಸಲಾದ ಮ್ಯಾರಥಾನ್ ನಲ್ಲಿ ಓಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಕ್ಯಾಂಪ್ಬೆಲ್ ತಂದೆ ಮಾರ್ಟಿನ್ ಎರಡು ವರ್ಷಗಳ ಹಿಂದೆ ನಿಧನರಾಗಿದ್ದರು.
ಕ್ಯಾಂಪ್ಬೆಲ್ ಈ ತಿಂಗಳ ಆರಂಭದಲ್ಲಿ ನಡೆದ ಮ್ಯಾಂಚೆಸ್ಟರ್ ಮ್ಯಾರಥಾನ್ನಲ್ಲಿ ಎರಡು ಗಂಟೆಗಳ ಅವಧಿಯಲ್ಲಿ ಗುರಿ ತಲುಪಿದ್ದರು.
Next Story