ಐಪಿಎಲ್: ಸನ್ರೈಸರ್ಸ್ ಹೈದರಾಬಾದ್ 118ಕ್ಕೆ ಆಲೌಟ್
ಯೂಸುಫ್ ಪಠಾಣ್
ಮುಂಬೈ, ಎ.24: ಮುಂಬೈ ವಿರುದ್ಧದ ಐಪಿಎಲ್ನ 23ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಸಾಧಾರಣ ಮೊತ್ತ ದಾಖಲಿಸಿದೆ.
ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸನ್ರೈಸರ್ಸ್ ತಂಡ 18.4 ಓವರ್ಗಳಲ್ಲಿ 118 ರನ್ಗಳಿಗೆ ಆಲೌಟಾಗಿದೆ.
ಮುಂಬೈ ಇಂಡಿಯನ್ಸ್ ತಂಡದ ಮಿಚೆಲ್ ಮೆಕ್ಲೀನಘನ್ (22ಕ್ಕೆ 2), ಹಾರ್ದಿಕ್ ಪಾಂಡ್ಯ(20ಕ್ಕೆ 2), ಮಾಯಂಕ್ ಮಾರ್ಕಂಡೆ (15ಕ್ಕೆ 2) ಜಸ್ಪ್ರೀತ್ ಬುಮ್ರಾ (25ಕ್ಕೆ 1) ಮತ್ತು ಮುಸ್ತಫಿಝುರ್ರಹ್ಮಾನ್(18ಕ್ಕೆ 1) ದಾಳಿಗೆ ಸಿಲುಕಿದ ಸನ್ರೈಸರ್ಸ್ ದೊಡ್ಡ ಮೊತ್ತದ ಸವಾಲನ್ನು ಕಲೆ ಹಾಕುವಲ್ಲಿ ಎಡವಿದೆ.
ಅಂತಿಮವಾಗಿ ಯೂಸುಫ್ ಪಠಾಣ್ ಹೋರಾಟ ನಡೆಸಿ ತಂಡದ ಸ್ಕೋರ್ನ್ನು ನೂರರ ಗಡಿ ದಾಟಿಸಿದರು. ಪಠಾಣ್ 29 ರನ್ ಮತ್ತು ನಾಯಕ ಕೇನ್ ವಿಲಿಯಮ್ಸನ್ 29 ರನ್ ಗಳಿಸಿರುವುದು ತಂಡದ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದರು. ಇವರನ್ನು ಹೊರತುಪಡಿಸಿದರೆ ಮನೀಷ್ ಪಾಂಡೆ(16), ಮುಹಮ್ಮದ್ ನಬಿ(14) ಎರಡಂಕೆಯ ಸ್ಕೋರ್ ದಾಖಲಿಸಿದರು.
ಶಿಖರ್ ಧವನ್(5), ವೃದ್ಧಿಮಾನ್ ಸಹಾ(0), ಶಾಕಿಬ್ ಅಲ್ ಹಸನ್(2), ರಶೀದ್ ಖಾನ್(6) , ಬಾಸಿಲ್ ಥಾಂಪಿ(3), ಸಿದ್ಧಾರ್ಥ್ ಕೌಲ್(2) ವಿಫಲರಾದರು.