ಐಪಿಎಲ್: ಸನ್ರೈಸರ್ಸ್ಗೆ ಜಯ
ಮುಂಬೈ, ಎ.24: ಐಪಿಎಲ್ನ 23ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ತಂಡ 31 ರನ್ಗಳ ಜಯ ಗಳಿಸಿದೆ.
ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 119 ರನ್ಗಳ ಸವಾಲನ್ನು ಪಡೆದ ಮುಂಬೈ ತಂಡ 18.5 ಓವರ್ಗಳಲ್ಲಿ 87 ರನ್ಗಳಿಗೆ ಆಲೌಟಾಗಿದೆ.
ಸೂರ್ಯಕುಮಾರ್ ಯಾದವ್ (34) ಮತ್ತು ಕೃನಾಲ್ ಪಾಂಡ್ಯ(24) ಇವರನ್ನು ಹೊರತುಪಡಿಸಿದರೆ ತಂಡದ ಸಹ ಆಟಗಾರರು ಕಳಪೆ ಪ್ರದರ್ಶನ ನೀಡಿದರು. ಇದರಿಂದಾಗಿ ಮುಂಬೈ ತಂಡ ಸೋಲು ಅನುಭವಿಸಿತು.
ಸನ್ರೈಸರ್ಸ್ ತಂಡ 18.4 ಓವರ್ಗಳಲ್ಲಿ 118 ರನ್ಗಳಿಗೆ ಆಲೌಟಾಗಿತ್ತು.
Next Story