ನಿಧಾನಗತಿಯ ಬೌಲಿಂಗ್: ಕೊಹ್ಲಿಗೆ 12 ಲಕ್ಷ ರೂ. ದಂಡ
ಬೆಂಗಳೂರು, ಎ.26: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬುಧವಾರ ರಾತ್ರಿ ನಡೆದ ಐಪಿಎಲ್ ಪಂದ್ಯದ ವೇಳೆ ನಿಧಾನಗತಿಯ ಬೌಲಿಂಗ್ ಕಾಯ್ದುಕೊಂಡ ತಪ್ಪಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.
ಇನಿಂಗ್ಸ್ ಉದ್ದಕ್ಕೂ ನಿಧಾನಗತಿಯ ಬೌಲಿಂಗ್ ಮಾಡಿದ್ದಕ್ಕೆ ಕೊಹ್ಲಿಗೆ ಛೀಮಾರಿ ಹಾಕಲಾಗಿದೆ. ಈ ವರ್ಷದ ಐಪಿಎಲ್ನಲ್ಲಿ ಮೊದಲ ಬಾರಿ ತಪ್ಪೆಸಗಿರುವ ಆರ್ಸಿಬಿಯ ನಾಯಕ ಕೊಹ್ಲಿಗೆ ಐಪಿಎಲ್ ನೀತಿ ಸಂಹಿತೆಯ ಪ್ರಕಾರ 12 ಲಕ್ಷ ರೂ. ದಂಡ ವಿಧಿಸಲಾಗಿದೆ.
ಆರ್ಸಿಬಿ ಈ ವರ್ಷದ ಐಪಿಎಲ್ನಲ್ಲಿ ಮೊದಲ ಬಾರಿ ನಿಧಾನಗತಿಯ ಬೌಲಿಂಗ್ಗೆ ಸಂಬಂಧಿಸಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದೆ. ನಾಯಕ ಕೊಹ್ಲಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಪತ್ರಿಕಾಪ್ರಕಟನೆಯಲ್ಲಿ ತಿಳಿಸಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎಂಎಸ್ ಧೋನಿ ನೇತೃತ್ವದ ಸಿಎಸ್ಕೆ ತಂಡ ಆರಂಭಿಕ ಆಟಗಾರ ಅಂಬಟಿ ರಾಯುಡು(82,53 ಎಸೆತ)ಹಾಕಿಕೊಟ್ಟ ಭದ್ರಬುನಾದಿ ನೆರವಿನಿಂದ 5 ವಿಕೆಟ್ಗಳಿಂದ ಜಯ ಸಾಧಿಸಿತ್ತು.