ಸೆಮಿಫೈನಲ್ನಲ್ಲಿ ಹಾಲೆಪ್ಗೆ ಸೋಲುಣಿಸಿದ ವಂಡೆವೆಘೆ
ಸ್ಟಟ್ಗರ್ಟ್ ಗ್ರ್ಯಾನ್ ಪ್ರಿ ಟೆನಿಸ್ ಟೂರ್ನಮೆಂಟ್
ಸ್ಟಟ್ಗರ್ಟ್, ಎ.28: ಡಬ್ಲುಟಿಎ ಸ್ಟಟ್ಗರ್ಟ್ ಗ್ರಾನ್ ಪ್ರಿ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ನಲ್ಲಿ ಅಮೆರಿಕದ ಆಟಗಾರ್ತಿ ಕೊಕೊ ವಂಡೆವೆೆ ಅವರು ರುಮೇನಿಯಾದ ಆಟಗಾರ್ತಿ ಸಿಮೊನಾ ಹಾಲೆಪ್ ವಿರುದ್ಧ 6-4, 6-1 ಸೆಟ್ಗಳಿಂದ ಜಯ ಗಳಿಸಿ ಸೆಮಿಫೈನಲ್ ತಲುಪಿದ್ದಾರೆ.
ಯುಎಸ್ ಓಪನ್ನಲ್ಲಿ ಸೆಮಿಫೈನಲ್ ತಲುಪಿದ್ದ ವಂಡೆವೆೆ ಅವರು ಕ್ರಾಸ್ ಕೋರ್ಟ್ ಮತ್ತು ಬ್ಯಾಕ್ ಹ್ಯಾಂಡ್ ಹೊಡೆತಗಳ ಮೂಲಕ ಕಠಿಣ ಸ್ಪರ್ಧೆ ನೀಡಿ ಹಾಲೆಪ್ಗೆ ಸೋಲುಣಿಸಿದರು.
ವಂಡೆವೆಘ ಸೆಮಿಫೈನಲ್ನಲ್ಲಿ ಫ್ರಾನ್ಸ್ನ ಕ್ಯಾರೋಲಿನಾ ಗಾರ್ಸಿಯಾ ಸವಾಲು ಎದುರಿಸಲಿದ್ದಾರೆ. ಗಾರ್ಸಿಯಾ ಕ್ವಾರ್ಟರ್ ಫೈನಲ್ನಲ್ಲಿ ಉಕ್ರೇನ್ನ ಸ್ವಿಟೋಲಿನಾ ವಿರುದ್ಧ 6-7(4), 6-4, 6-2 ಅಂತರದಲ್ಲಿ ಜಯ ಗಳಿಸಿದ್ದರು.
Next Story