ಅಯ್ಯರ್ ಅರ್ಧಶತಕದ ದಾಖಲೆ
ಹೊಸದಿಲ್ಲಿ, ಎ.28: ಡೆಲ್ಲಿ ಡೇರ್ಡೆವಿಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲಿ ಅರ್ಧಶತಕದ ಮೂಲಕ ತಂಡಕ್ಕೆ ಗೆಲುವು ತಂದು ಕೊಟ್ಟಿದ್ದರು.
ಅಯ್ಯರ್ ಈ ಸಾಧನೆ ಮಾಡಿದ ನಾಲ್ಕನೇ ನಾಯಕ. ಅವರಿಗೆ ಶತಕ ದಾಖಲಿಸುವ ಅವಕಾಶ ಸಿಗಲಿಲ್ಲ. ಔಟಾಗದೆ 93 ರನ್ ಗಳಿಸಿದರು.
ಈ ಮೊದಲು ಆ್ಯರನ್ ಫಿಂಚ್(ಔಟಾಗದೆ 65) ಪುಣೆ ವಾರಿಯರ್ಸ್ ನಾಯಕರಾಗಿ 2013ರಲ್ಲಿ, ಆ್ಯರನ್ ಫಿಂಚ್ (55) ಅವರು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರಾಗಿ ಮತ್ತು ಆ್ಯಡಮ್ ಗಿಲ್ಕ್ರಿಸ್ಟ್ (54) ಅವರು 2008ರಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡದ ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲಿ ಅರ್ಧಶತಕ ದಾಖಲಿಸಿದ ಸಾಧನೆ ಮಾಡಿದ್ದರು.
Next Story