ಅರ್ಜುನ್ರೆಡ್ಡಿ ಬಾಲಿವುಡ್ ರಿಮೇಕ್ಗೆ ಶಾಹಿದ್ ಕಪೂರ್ ಹೀರೋ
ಕಳೆದ ವರ್ಷದ ತೆಲುಗಿನ ಸೂಪರ್ಹಿಟ್ ಚಿತ್ರ ಅರ್ಜುನ್ ರೆಡ್ಡಿ ಹಿಂದಿಯಲ್ಲಿ ರಿಮೇಕ್ ಆಗುವ ಸನ್ನಾಹದಲ್ಲಿದೆ.ಚಿತ್ರವು ಹಿಂದಿಗೆ ರಿಮೇಕ್ ಆಗಲಿದೆಯೆಂದು ಈ ಮೊದಲೇ ಸುದ್ದಿಯಾಗಿತ್ತಾದರೂ, ಚಿತ್ರದ ನಾಯಕ ನಟರ್ಯಾರೆಂಬ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡಿದ್ದವು,ಅರ್ಜುನ್ ಕಪೂರ್, ಚಿತ್ರದ ನಾಯಕನಾಗಲಿದ್ದಾರೆಂಬ ಬಲವಾದ ವದಂತಿಗಳು ಕೇಳಿಬಂದಿತ್ತು. ಆದರೆ, ಇದೀಗ ಆ ಎಲ್ಲಾ ಊಹಾಪೋಹಗಳಿಗೆ ತೆರೆಬಿದ್ದಿದ್ದು, ಶಾಹಿದ್ ಕಪೂರ್ ನಾಯಕನಾಗಿ ನಟಿಸುವುದು ಖಚಿತವಾಗಿದೆ. ಸದ್ಯ ಶಾಹಿದ್ ಕಪೂರ್, ಶ್ರದ್ಧಾ ಕಪೂರ್ ಜೊತೆ ಬಟ್ಟಿ ಗುಲ್ ಮೀಟರ್ ಚಾಲು ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಆದಾಗ್ಯೂ ಅವರು ಬಹಳ ಸಮಯದಿಂದ ಅರ್ಜುನ್ ರೆಡ್ಡಿಯ ಬಾಲಿವುಡ್ ರಿಮೇಕ್ ಬಗ್ಗೆ ನಿರ್ಮಾಪಕರ ಜೊತೆ ಚರ್ಚಿಸುತ್ತಿದ್ದರಂತೆ. ಸದ್ಯ ಚಿತ್ರದ ಪ್ರೀ-ಪ್ರೊಡಕ್ಷನ್ ಹಂತದಲ್ಲಿದ್ದು ಚಿತ್ರತಂಡ ಲೋಕೇಶನ್ಗಳ ಹುಡುಕಾಟದಲ್ಲಿ ನಿರತವಾಗಿದೆ. ವಿದೇಶದಲ್ಲ್ಲೂ ಚಿತ್ರೀಕರಣ ಗೊಳ್ಳಲಿರುವ ಈ ಚಿತ್ರವು ಜುಲೈ ವೇಳೆಗೆ ಸೆಟ್ಟೇರಲಿದೆ.
ಮೂಲ ತೆಲುಗು ಚಿತ್ರ ಅರ್ಜುನ್ ರೆಡ್ಡಿಯಲ್ಲಿ ವಿಜಯ್ದೇವರಕೊಂಡ ಅವರು,ಭಗ್ನಪ್ರೇಮದ ಪರಿಣಾಮವಾಗಿ ಮದ್ಯ ಹಾಗೂ ಮಾದಕದ್ರವ್ಯ ವ್ಯಸನಿಯಾಗುವ ಸರ್ಜನ್ ಒಬ್ಬನ ಕಥೆಯನ್ನು ಹೇಳುತ್ತದೆ. ಯುವಜನರನ್ನು ಅಪಾರವಾಗಿ ಸೆಳೆದಿದ್ದ ಈ ಚಿತ್ರ ಬಾಕ್ಸ್ಆಫೀಸ್ನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು, ಮಾತ್ರವಲ್ಲ ವಿಮರ್ಶಕರ ಮೆಚ್ಚುಗೆಗೂ ಪಾತ್ರವಾಗಿತ್ತು, ಅರ್ಜುನ್ ರೆಡ್ಡಿ ಈಗಾಗಲೇ ತಮಿಳಿನಲ್ಲಿ ರಿಮೇಕ್ ಆಗುತ್ತಿದೆ.