ಡೆಲ್ಲಿಗೆ 11 ರನ್ಗಳ ಜಯ
ಹೊಸದಿಲ್ಲಿ, ಮೇ 20: ಮುಂಬೈ ಇಂಡಿಯನ್ಸ್ ವಿರುದ್ಧ ಐಪಿಎಲ್ ಟ್ವೆಂಟಿ-20 ಟೂರ್ನಿಯ 55ನೇ ಪಂದ್ಯದಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ತಂಡ 11 ರನ್ಗಳ ರೋಚಕ ಜಯ ಗಳಿಸಿದೆ.
ದಿಲ್ಲಿಯ ಫಿರೋಝ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 175 ರನ್ಗಳ ಸವಾಲನ್ನು ಪಡೆದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ 19.3 ಓವರ್ಗಳಲ್ಲಿ 163 ರನ್ಗಳಿಗೆ ಆಲೌಟಾಗಿದೆ. ಇದರೊಂದಿಗೆ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಹಂತ ತಲುಪುವ ಅವಕಾಶವನ್ನು ಕೈ ಚೆಲ್ಲಿದೆ.
ಸಂದೀಪ್ ಲಾಮಿಚಾನೆ (36ಕ್ಕೆ 3) ಮತ್ತು ಅಮಿತ್ ಮಿಶ್ರಾ (19ಕ್ಕೆ 3), ಹರ್ಷಲ್ ಪಟೇಲ್(28ಕ್ಕೆ 3), ದಾಳಿಗೆ ಸಿಲುಕಿದ ಮುಂಬೈ ಇಂಡಿಯನ್ಸ್ ತಂಡದ ಪರ ಎವಿನ್ ಲೆವಿಸ್(48) ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದರು
Next Story