ಐಪಿಎಲ್:ಚೆನ್ನೈ ಸೂಪರ್ಕಿಂಗ್ಸ್ ಫೈನಲ್ಗೆ
ಆರಂಭಿಕ ದಾಂಡಿಗ ಎಫ್ ಡು ಪ್ಲೆಸಿಸ್ ಔಟಾಗದೆ 67 ರನ್(42ಎ, 5ಬೌ,4ಸಿ)
ಮುಂಬೈ, ಮೇ 22: ಇಲ್ಲಿ ನಡೆದ ಹನ್ನೊಂದನೇ ಆವೃತ್ತಿಯ ಐಪಿಎಲ್ ಟ್ವೆಂಟಿ-20 ಟೂರ್ನಿಯ ಮೊದಲ ಕ್ವಾಲಿಫೈಯರ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 2 ವಿಕೆಟ್ಗಳ ಜಯ ಗಳಿಸಿದ ಚೆನ್ನೈಸೂಪರ್ ಕಿಂಗ್ಸ್ ತಂಡ ಫೈನಲ್ ಪ್ರವೇಶಿಸಿದೆ
ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 140 ರನ್ ಗಳಿಸಬೇಕಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇನ್ನೂ 5 ಎಸೆತಗಳು ಬಾಕಿ ಇರುವಾಗಲೇ 8 ವಿಕೆಟ್ ನಷ್ಟದಲ್ಲಿ ಗೆಲುವಿಗೆ ಅಗತ್ಯದ ರನ್ ಗಳಿಸಿತು.
ಚೆನ್ನೈ ತಂಡದ ಆರಂಭಿಕ ದಾಂಡಿಗ ಎಫ್ ಡು ಪ್ಲೆಸಿಸ್ ಔಟಾಗದೆ 67 ರನ್(42ಎ, 5ಬೌ,4ಸಿ) ಮತ್ತು ಶಾರ್ದುಲ್ ಠಾಕೂರ್ ಔಟಾಗದೆ 15ರನ್(5ಎ, 3ಬೌ) ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಸನ್ರೈಸರ್ಸ್ ಹೈದರಾಬಾದ್ ತಂಡ 20 ಓವರ್ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 139 ರನ್ ಗಳಿಸಿತ್ತು.
Next Story