ಮೊದಲ ಬಾರಿ ಪ್ರಿ-ಕ್ವಾರ್ಟರ್ಗೆ ತಲುಪಿದ ಝೈರೆವ್
ಪ್ಯಾರಿಸ್, ಜೂ.1: ಜರ್ಮನಿಯ ಯುವ ಆಟಗಾರ ಅಲೆಕ್ಸಾಂಡರ್ ಝ್ವೆರೆವ್ ಇದೇ ಮೊದಲ ಬಾರಿ ಫ್ರೆಂಚ್ ಓಪನ್ನಲ್ಲಿ ನಾಲ್ಕನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಎರಡನೇ ಶ್ರೇಯಾಂಕದ ಝ್ವೆರೆವ್ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ನ ಮೂರನೇ ಸುತ್ತಿನ ಪಂದ್ಯದಲ್ಲಿ ಬೊಸ್ನಿಯಾದ ಡಮಿರ್ ಝುಂಹರ್ರನ್ನು 6-2, 3-6, 4-6, 7-6(7/3), 7-5 ಸೆಟ್ಗಳಿಂದ ಮಣಿಸಿದ್ದಾರೆ.
21ರ ಹರೆಯದ ಝ್ವೆರೆವ್ ಮುಂದಿನ ಸುತ್ತಿನಲ್ಲಿ ಫ್ರಾನ್ಸ್ನ ಲುಕಾಸ್ ಪೌಲ್ಲಿ ಅಥವಾ ರಶ್ಯದ ಕರೆನ್ ಖಚಾನೊವ್ರನ್ನು ಎದುರಿಸಲಿದ್ದಾರೆ.
Next Story