ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ನ್ಯೂಝಿಲ್ಯಾಂಡ್ ಮಹಿಳಾ ತಂಡ
ಪುರುಷರ ತಂಡವೂ ಮಾಡಿಲ್ಲ ಈ ಸಾಧನೆ
ಡಬ್ಲಿನ್, ಜೂ.8: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತೀ ಹೆಚ್ಚು ಸ್ಕೋರ್ ದಾಖಲಿಸುವ ಮೂಲಕ ನ್ಯೂಝಿಲ್ಯಾಂಡ್ ಮಹಿಳಾ ತಂಡ ಹೊಸ ದಾಖಲೆ ಬರೆದಿದೆ. ಐರ್ ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಕಿವೀಸ್ ಮಹಿಳೆಯರು 4 ವಿಕೆಟ್ ನಷ್ಟಕ್ಕೆ 490 ರನ್ ಗಳಿಸಿದ್ದಾರೆ.
ಮೊದಲು ಬ್ಯಾಟ್ ಮಾಡಿದ ನ್ಯೂಝಿಲ್ಯಾಂಡ್ ನಾಯಕಿ ಸುಝೀ ಬೇಟ್ಸ್ ಅವರ 151 ರನ್ ಗಳ ನೆರವಿನೊಂದಿಗೆ 490 ರನ್ ಗಳಿಸಿತು. 94 ಎಸೆತಗಳನ್ನು ಎದುರಿಸಿದ ಅವರು 24 ಬೌಂಡರಿ ಹಾಗು 2 ಸಿಕ್ಸರ್ ಗಳ ಮೂಲಕ 151 ರನ್ ಗಳಿಸಿದರು. 17 ಬೌಂಡರಿ ಹಾಗು ಎರಡು ಸಿಕ್ಸರ್ ಸಿಡಿಸಿದ ಮ್ಯಾಡ್ಡಿ ಗ್ರೀನ್ 105 ಎಸೆತಗಳಲ್ಲಿ 121 ರನ್ ಗಳಿಸಿದರು.
ಅಮೆಲಿಯಾ ಕೆರ್ 71 ಎಸೆತಗಳಲ್ಲಿ 9 ಬೌಂಡರಿ ಹಾಗು 3 ಸಿಕ್ಸ್ ನೆರವನಿಂದ 81 ರನ್ ಗಳಿಸಿದರು. ಪುರುಷರ ಕ್ರಿಕೆಟ್ ನಲ್ಲಿ 444 ರನ್ ಅತ್ಯಧಿಕ ಸ್ಕೋರ್ ಆಗಿದೆ. 2016ರಲ್ಲಿ ಪಾಕಿಸ್ತಾನದ ವಿರುದ್ಧ ಇಂಗ್ಲೆಂಡ್ ಈ ಸಾಧನೆ ಮಾಡಿತ್ತು.
Next Story