ಫಿಫಾ ವಿಶ್ವಕಪ್: ಪೊಲೆಂಡ್ಗೆ ಆಘಾತ ನೀಡಿದ ಸೆನೆಗಲ್
ಮಾಸ್ಕೊ, ಜೂ.19: ವಿಶ್ವದ ನಂ.8 ತಂಡವಾಗಿರುವ ಪೊಲೆಂಡ್ಗೆ ಇಲ್ಲಿ ನಡೆದ ವಿಶ್ವಕಪ್ನ ‘ಎಚ್’ ಗುಂಪಿನ ಪಂದ್ಯದಲ್ಲಿ ನಂ.27 ತಂಡವಾಗಿರುವ ಸೆನೆಗಲ್ 2-1 ಅಂತದಲ್ಲಿ ಸೋಲುಣಿಸಿದೆ.
ಪೊಲೆಂಡ್ ತಂಡದ ಥಿಯಾಗೊ ಸಿಯೊನೆಕ್ ತನ್ನ ತಂಡದ ಗೋಲು ಪೆಟ್ಟಿಗೆಗೆ ಚೆಂಡನ್ನು ಕಳುಹಿಸಿದ ಹಿನ್ನೆಲೆಯಲ್ಲಿ ಸೆನೆಗಲ್ಗೆ ವರದಾನವಾಗಿ ಪರಿಣಮಿಸಿತು. ಇದು ಪೊಲೆಂಡ್ಗೆ ದುಬಾರಿಯಾಗಿ ಪರಿಣಮಿಸಿತು. ಸೆನೆಗಲ್ ತಂಡದ ನಿಯಾಂಗ್ 60ನೇ ನಿಮಿಷದಲ್ಲಿ ಗೋಲು ದಾಖಲಿಸಿ 2-0 ಮುನ್ನಡೆ ಸಾಧಿಸಲು ನೆರವಾದರು.
ಆರಂಭದಲ್ಲೇ ಸ್ವಯಂ ಗೋಲು ಕಾರಣದಿಂದಾಗಿ ಆಘಾತ ಅನುಭವಿಸಿದ ಪೊಲೆಂಡ್ ಪರ 86ನೇ ನಿಮಿಷದಲ್ಲಿ ಕ್ರಿಚೊವಿಯಾಕ್ ಅವರು ಗೋಲು ಜಮೆ ಮಾಡಿದರು. ಆದರೆ ಎರಡನೇ ಗೋಲು ಜಮೆ ಮಾಡಲು ಪೊಲೆಂಡ್ಗೆ ಸಾಧ್ಯವಾಗಲಿಲ್ಲ. ಸೆನೆಗಲ್ ವಿಶ್ವಕಪ್ನಲ್ಲಿ ಗೆಲುವಿನ ಖಾತೆ ತೆರೆಯಿತು.
Next Story