ಆಸ್ಟ್ರೇಲಿಯ ಮಹಿಳಾ ಫುಟ್ಬಾಲ್ ಪಂದ್ಯ ನಿಲ್ಲಿಸಿದ ಕಾಂಗರೂ!
ಕ್ಯಾನ್ಬೆರ್ರಾ, ಜೂ.25: ಆಸ್ಟ್ರೇಲಿಯ ಮಹಿಳಾ ಫುಟ್ಬಾಲ್ ಪಂದ್ಯ ನಡೆಯುತ್ತಿದ್ದಾಗಲೇ ಕಾಂಗರೂವೊಂದು ಪಿಚ್ನೊಳಗೆ ಪ್ರವೇಶಿಸಿ ಅರ್ಧಗಂಟೆ ಕಾಲ ಪಂದ್ಯಕ್ಕೆ ಅಡ್ಡಿಪಡಿಸಿರುವ ಅಪರೂಪದ ಘಟನೆ ಕ್ಯಾನ್ಬೆರ್ರಾದಲ್ಲಿ ನಡೆದಿದೆ.
ರವಿವಾರ ಮಧ್ಯಾಹ್ನ ಕ್ಯಾನ್ಬೆರ್ರಾದ ಎರಡು ಅಗ್ರ ತಂಡಗಳಾದ ಕ್ಯಾಪಿಟಲ್ ಫುಟ್ಬಾಲ್ ಕ್ಲಬ್ ಹಾಗೂ ಬೆಲೊಕನೆನ್ ಯುನೈಟೆಡ್ ನಡುವೆ ಪಂದ್ಯ ನಡೆಯುತ್ತಿದ್ದಾಗ ಕಾಂಗರೂ ಮೈದಾನದಲ್ಲಿ ಪ್ರತ್ಯಕ್ಷವಾಯಿತು.
ಆರಡಿ ಎತ್ತರದ ಗಂಡು ಕಾಂಗರೂ ಪಂದ್ಯದ ದ್ವಿತೀಯಾರ್ಧದಲ್ಲಿ ಮೈದಾನದೊಳಗೆ ಪ್ರವೇಶಿಸಿದ ಕಾರಣ ಸುಮಾರು 32 ನಿಮಿಷಗಳ ಆಟ ನಷ್ಟವಾಯಿತು.
Next Story