ಕಬಡ್ಡಿ ಮಾಸ್ಟರ್ಸ್: ಭಾರತ ಫೈನಲ್ಗೆ
ದುಬೈ, ಜೂ.29: ಕಬಡ್ಡಿ ಮಾಸ್ಟರ್ಸ್ ಟೂರ್ನಿಯ ಸೆಮಿ ಫೈನಲ್ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಭಾರತ ತಂಡ ದಕ್ಷಿಣ ಕೊರಿಯಾವನ್ನು ಮಣಿಸಿ ಫೈನಲ್ಗೆ ತಲುಪಿದೆ.
ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಕೊರಿಯಾವನ್ನು 36-20 ಅಂಕಗಳ ಅಂತರದಿಂದ ಸೋಲಿಸಿತು. ಫೈನಲ್ನಲ್ಲಿ ಇರಾನ್ ತಂಡವನ್ನು ಎದುರಿಸಲಿದೆ. ಇರಾನ್ ಮತ್ತೊಂದು ಸೆಮಿ ಫೈನಲ್ನಲ್ಲಿ ಪಾಕಿಸ್ತಾನವನ್ನು 40-21 ಅಂಕಗಳಿಂದ ಸೋಲಿಸಿದೆ.
ಭಾರತ-ಇರಾನ್ ಎರಡೂ ತಂಡಗಳು ಭರ್ಜರಿ ಫಾರ್ಮ್ನಲ್ಲಿದ್ದು ಫೈನಲ್ ಪಂದ್ಯ ಕುತೂಹಲ ಕೆರಳಿಸಿದೆ.
ಕನ್ನಡಿಗ ರಿಶಾಂಕ್ ದೇವಾಡಿಗ ರೈಡರ್ಗಳ ಪೈಕಿ ಗರಿಷ್ಠ ಸ್ಕೋರ್ ಗಳಿಸಿದ್ದಾರೆ. ಗಿರೀಶ್ ಉತ್ತಮ ಡಿಫೆಂಡರ್ ಆಗಿದ್ದು 9 ಅಂಕ ಗಳಿಸಿದ್ದಾರೆ.
Next Story