ಪೋರ್ಚುಗಲ್ ಅನ್ನು ಮಣಿಸಿದ ಉರುಗ್ವೆ ಕ್ವಾರ್ಟರ್ ಫೈನಲ್ ಗೆ
ಲಿಯೊನೆಲ್ ಮೆಸ್ಸಿ ಬೆನ್ನಿಗೆ ವರ್ಲ್ಡ್ ಕಪ್ ನಿಂದ ರೊನಾಲ್ಡೊ ಔಟ್
ಎಡಿನ್ಸನ್ ಕವಾನಿ
ರಷ್ಯಾ, ಜು. 1: ಫ್ರಾನ್ಸ್ ವಿರುದ್ಧ ಲಿಯೊನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಸೋತು ವಿಶ್ವ ಕಪ್ ನಿಂದ ಹೊರ ಬಿದ್ದ ಬೆನ್ನಿಗೆ ಇನ್ನೋರ್ವ ಸ್ಟಾರ್ ಆಟಗಾರ ಕ್ರಿಶ್ಚಿಯನೋ ರೊನಾಲ್ಡೊ ಅವರ ನೇತೃತ್ವದ ಪೋರ್ಚುಗಲ್ ತಂಡ ಉರುಗ್ವೆ ವಿರುದ್ಧ ಆಘಾತಕಾರಿ ಸೋಲು ಕಂಡು ಕೂಟದಿಂದ ನಿರ್ಗಮಿಸಿದೆ.
ಈ ಮೂಲಕ ಶನಿವಾರ ಎರಡು ಪ್ರಮುಖ ತಂಡಗಳು ವಿಶ್ವಕಪ್ ನಿಂದ ಹೊರಬಿದ್ದಿವೆ.
ಎಡಿನ್ಸನ್ ಕವಾನಿ ಅವರ ಎರಡು ಗೋಲುಗಳ ನೆರವಿನಿಂದ ಉರುಗ್ವೆ ತಂಡ ಪೋರ್ಚುಗಲ್ ತಂಡವನ್ನು 2 - 1 ಗೋಲುಗಳ ಅಂತರದಿಂದ ಸೋಲಿಸಿ ಕ್ವಾರ್ಟರ್ ಫೈನಲ್ ಗೆ ಏರಿಗೆ. ಅಲ್ಲಿ ಉರುಗ್ವೆ ತಂಡ ಈಗಾಗಲೇ ಅರ್ಜೆಂಟೀನಾ ವನ್ನು ಮಣಿಸಿರುವ ಪ್ರಬಲ ಫ್ರಾನ್ಸ್ ಅನ್ನು ಶುಕ್ರವಾರ ಎದುರಿಸಲಿದೆ.
7 ಹಾಗೂ 62 ನೇ ನಿಮಿಷದಲ್ಲಿ ಎಡಿನ್ಸನ್ ಕವಾನಿ ಬಾರಿಸಿದ 2 ಗೋಲುಗಳು ಪೋರ್ಚುಗಲ್ ಪಾಲಿಗೆ ದುಬಾರಿಯಾಗಿ ಪರಿಣಮಿಸಿದವು. ಪೋರ್ಚುಗಲ್ ಪರವಾಗಿ 55ನೇ ನಿಮಿಷದಲ್ಲಿ ಪೇಪೆ ಒಂದು ಗೋಲು ಬಾರಿಸಿದರು.
ಪೋರ್ಚುಗಲ್ ನ ನಾಯಕ ಹಾಗೂ ಸ್ಟಾರ್ ಆಟಗಾರ ಕ್ರಿಶ್ಚಿಯನೋ ರೊನಾಲ್ಡೊ ಯಾವುದೇ ಗೋಲು ಬಾರಿಸಲು ವಿಫಲರಾದರು.