ವಿಂಬಲ್ಡನ್: ಸೆರೆನಾ 2ನೇ ಸುತ್ತಿಗೆ
ಲಂಡನ್, ಜು.3: ವಿಶ್ವದ ಮಾಜಿ ನಂ.1 ಟೆನಿಸ್ ತಾರೆ ಅಮೆರಿಕದ ಸೆರೆನಾ ವಿಲಿಯಮ್ಸ್ ವಿಂಬಲ್ಡನ್ ಚಾಂಪಿಯನ್ಶಿಪ್ನಲ್ಲಿ ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ.
ಸೋಮವಾರ ನಡೆದ ಮೊದಲ ಸುತ್ತಿನ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಸೆರೆನಾ ಅವರು ಹಾಲೆಂಡ್ನ ಅರಾಂತಸ್ಕಾ ರುಸ್ರನ್ನು 7-5, 6-3 ಅಂತರದಲ್ಲಿ ಮಣಿಸಿ ದ್ವಿತೀಯ ಸುತ್ತು ತಲುಪಿದ್ದಾರೆ.
ತಾಯಿಯಾದ ಬಳಿಕ ಸೆರೆನಾ ಅವರು ವಿಂಬಲ್ಡನ್ನಲ್ಲಿ ಮೊದಲ ಜಯ ದಾಖಲಿಸಿ ದ್ದಾರೆ. ಕಳೆದ ವರ್ಷ ಗರ್ಭಿಣಿಯಾದ ಹಿನ್ನೆಲೆಯಲ್ಲಿ ವಿಂಬಲ್ಡನ್ ಚಾಂಪಿಯನ್ಶಿಪ್ನಿಂದ ಸೆರೆನಾ ದೂರ ಉಳಿದಿದ್ದರು.
ವಿಶ್ವ ಟೆನಿಸ್ ರ್ಯಾಂಕಿಂಗ್ನಲ್ಲಿ 181ನೇ ಸ್ಥಾನದಲ್ಲಿರುವ ಸೆರೆನಾ ವಿಲಿಯಮ್ಸ್ ಈ ಹಿಂದೆ 7 ಬಾರಿ ವಿಂಬಲ್ಡನ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.
Next Story