ನಡಾಲ್ ಗೆಲುವಿನಾರಂಭ
ಲಂಡನ್, ಜು.3: ವಿಶ್ವದ ನಂ.1 ಆಟಗಾರ ರಫೆಲ್ ನಡಾಲ್ ಇಸ್ರೇಲ್ನ ಡುಡಿ ಸೆಲಾರನ್ನು 6-3, 6-3, 6-2 ಸೆಟ್ಗಳಿಂದ ಸೋಲಿಸಿ ವಿಂಬಲ್ಡನ್ ಟೂರ್ನಿಯಲ್ಲಿ ಮಂಗಳವಾರ ಶುಭಾರಂಭ ಮಾಡಿದ್ದಾರೆ.
ಅರ್ಜೆಂಟೀನದ ಜುಯಾನ್ ಮಾರ್ಟಿನ್ ಡೆಲ್ ಪೊಟ್ರೊ ಜರ್ಮನಿಯ ಪೀಟರ್ ಗೊಜೊವಿಕ್ರನ್ನು 6-3, 6-4, 6-3 ಅಂತರದಿಂದ ಮಣಿಸಿ ಎರಡನೇ ಸುತ್ತಿಗೇರಿದರು. ಡೆಲ್ ಪೊಟ್ರೊ ಅವರು ಫೆಲಿಸಿಯಾನೊ ಲೊಪೆಝ್ರನ್ನು ಎದುರಿಸಲಿದ್ದಾರೆ.
ಜರ್ಮನಿಯ ಆಟಗಾರ ಅಲೆಕ್ಸಾಂಡರ್ ಝ್ವೆರೆವ್ ಆಸ್ಟ್ರೇಲಿಯದ ಜೇಮ್ಸ್ ಡಕ್ವರ್ತ್ ರನ್ನು 7-5, 6-2 6-0 ಅಂತರದಿಂದ ಸೋಲಿಸಿದ್ದಾರೆ.
Next Story