ಫೆಡರರ್ 16ನೇ ಬಾರಿ ಕ್ವಾರ್ಟರ್ ಫೈನಲ್ಗೆ
ವಿಂಬಲ್ಡನ್
ಲಂಡನ್, ಜು.9: ರೋಜರ್ ಫೆಡರರ್ ವಿಂಬಲ್ಡನ್ ಟೆನಿಸ್ ಟೂರ್ನಮೆಂಟ್ನ ಪುರುಷರ ವಿಭಾಗದ ಸಿಂಗಲ್ಸ್ನಲ್ಲಿ 16ನೇ ಬಾರಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
8ನೇ ಬಾರಿ ಚಾಂಪಿಯನ್ ಆಗಿರುವ ಸ್ವಿಟ್ಝರ್ಲೆಂಡ್ನ ಆಟಗಾರ ಫೆಡರರ್ ಅವರು ಸೋಮವಾರ ನಡೆದ ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಫ್ರಾನ್ಸ್ನ ಅಡ್ರಿಯಾನ್ ಮನಾರಿನೊ ವಿರುದ್ಧ 6-0, 7-5, 6-4 ಸೆಟ್ಗಳಿಂದ ಜಯ ಗಳಿಸಿದರು. 53ನೇ ಗ್ರಾನ್ ಸ್ಲಾಮ್ನ 8ರ ಘಟ್ಟ ತಲುಪಿರುವ 36ರ ಹರೆಯದ ಫೆಡರರ್ ಅವರು 32ನೇ ಸೆಟ್ಗಳಲ್ಲ್ಲಿ ಸತತ ಜಯಗಳಿಸಿದ್ದಾರೆ. ಅಡ್ರಿಯಾನ್ ಮನಾರಿನೊ ವಿರುದ್ಧ ಫೆಡರರ್ ಮೊದಲ ಸೆಟ್ನಲ್ಲಿ 16 ನಿಮಿಷಗಳಲ್ಲಿ ಜಯ ಗಳಿಸಿದ್ದರು.
Next Story