ರಿಯಲ್ ಮ್ಯಾಡ್ರಿಡ್ ತೊರೆದ ಕ್ರಿಸ್ಟಿಯಾನೋ ರೊನಾಲ್ಡೋ
955 ಕೋಟಿ ರೂ.ಗೆ ಜುವೆಂಟಸ್ ಸೇರಲಿರುವ ವಿಶ್ವಪ್ರಸಿದ್ಧ ಆಟಗಾರ
ಮ್ಯಾಡ್ರಿಡ್ , ಜು.10: ಪ್ರಸಿದ್ಧ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ರಿಯಲ್ ಮ್ಯಾಡ್ರಿಡ್ ಕ್ಲಬ್ ಅನ್ನು ತೊರೆದಿದ್ದು, ಜುವೆಂಟಸ್ ಕ್ಲಬ್ ಪರ ಆಡಲಿದ್ದಾರೆ ಎಂದು ಲಾ ಲಿಗಾ ಕ್ಲಬ್ ಹೇಳಿಕೆಯೊಂದರಲ್ಲಿ ತಿಳಿಸಿದೆ.
2008ರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ತೊರೆದಿದ್ದ ರೊನಾಲ್ಡೋ 80 ಮಿಲಿಯನ್ ಪೌಂಡ್ ದಾಖಲೆಯ ಮೊತ್ತದೊಂದಿಗೆ ರಿಯಲ್ ಮ್ಯಾಡ್ರಿಡ್ ಸೇರಿದ್ದರು. ರೊನಾಲ್ಡೊ ತಂಡದಲ್ಲಿದ್ದಾಗ ರಿಯಲ್ ಮ್ಯಾಡ್ರಿಡ್ 2 ಲಾ ಲಿಗಾ ಟೈಟಲ್ ಹಾಗು ನಾಲ್ಕು ಚಾಂಪಿಯನ್ಸ್ ಲೀಗ್ ಟ್ರೋಫಿ ಗೆದ್ದಿತ್ತು.
Next Story