ಪಾಕ್ನ ಶಹಝಾದ್ ಅನುತ್ತೀರ್ಣ
ಉದ್ದೀಪನಾ ಮದ್ದು ಸೇವನೆ ಪರೀಕ್ಷೆ
ಕರಾಚಿ, ಜು.10: ನಿಷೇಧಿತ ಉದ್ದೀಪನಾ ಮದ್ದು ಸೇವನೆ ಪರೀಕ್ಷೆಯಲ್ಲಿ ಪಾಕಿಸ್ತಾನದ ಅಗ್ರ ಕ್ರಮಾಂಕದ ದಾಂಡಿಗ ಅಹ್ಮದ್ ಶಹಝಾದ್ ಅನುತ್ತೀರ್ಣರಾಗಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಮಂಗಳವಾರ ಬಹಿರಂಗಪಡಿಸಿದೆ. ಪಿಸಿಬಿ ಜೂನ್ನಲ್ಲಿ ತಂಡದ ಆಟಗಾರನೊಬ್ಬ ಡೋಪಿಂಗ್ ಟೆಸ್ಟ್ ನಲ್ಲಿ ಅನುತ್ತೀರ್ಣನಾಗಿದ್ದಾನೆ ಎಂದು ಹೇಳಿತ್ತು. ಆದರೆ, ತಂಡದ ಆಟಗಾರನ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿತ್ತು. ಐಸಿಸಿ ನಿಯಮದಂತೆ ಲ್ಯಾಬ್ನ ಸಂಪೂರ್ಣ ವರದಿ ಬಂದ ಬಳಿಕ ಹೆಸರು ಬಹಿರಂಗಪಡಿಸುವುದಾಗಿ ಹೇಳಿತ್ತು. ‘‘ಡೋಪಿಂಗ್ ಪ್ರಕರಣದಲ್ಲಿ ಸ್ವತಂತ್ರ ಪರಿಶೀಲನಾ ಮಂಡಳಿ ವರದಿಯನ್ನು ಪಿಸಿಬಿ ಸ್ವೀಕರಿಸಿದೆ. ಕ್ರಿಕೆಟಿಗ ಅಹ್ಮದ್ ಶಹಝಾದ್ ನಿಷೇಧಿತ ಮದ್ದು ಸೇವನೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ಪಿಸಿಬಿ ಇಂದು ಜಾರ್ಜ್ಶೀಟ್ನ್ನು ನೀಡಲಿದೆ’’ ಎಂದು ಐಸಿಸಿ ತಿಳಿಸಿದೆ. 26ರ ಹರೆಯದ ಶಹಝಾದ್ ಪಾಕ್ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಪರದಾಡುತ್ತಿದ್ದಾರೆ.
Next Story