ಭಾರತದ ಓಟಗಾರ್ತಿ ಹಿಮಾ ದಾಸ್ ಐತಿಹಾಸಿಕ ಸಾಧನೆ
ಅಥ್ಲೆಟಿಕ್ಸ್ ಜೂ.ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನದ ನಗು
ಹೊಸದಿಲ್ಲಿ, ಜು.12: ಭಾರತದ ಓಟಗಾರ್ತಿ ಹಿಮಾ ದಾಸ್ ಐಎಎಎಫ್ ವಿಶ್ವ ಅಂಡರ್-20 ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಮಹಿಳೆಯರ 400 ಮೀ. ಓಟದಲ್ಲಿ ಚಿನ್ನದ ಪದಕ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಗುರುವಾರ ನಡೆದ 400 ಮೀ. ಓಟದ ಸ್ಪರ್ಧೆಯಲ್ಲಿ 51.46 ಸೆಕೆಂಡ್ನಲ್ಲಿ ಗುರಿ ತಲುಪಿದ ಹಿಮಾ ದಾಸ್ ಟ್ರಾಕ್ ಇವೆಂಟ್ನಲ್ಲಿ ಚಿನ್ನ ಜಯಿಸಿದ ಭಾರತದ ಮೊದಲ ಅಥ್ಲೀಟ್ ಎನಿಸಿಕೊಂಡರು.
ಬುಧವಾರ ನಡೆದ ಸೆಮಿ ಫೈನಲ್ಸ್ ಹೀಟ್ನಲ್ಲಿ ವೇಗದ ಓಟಗಾರ್ತಿ ಎನಿಸಿಕೊಂಡಿದ್ದ 18ರ ಹರೆಯದ ದಾಸ್ ಮಹಿಳೆಯರ 400 ಮೀ.ಓಟದಲ್ಲಿ ಫೈನಲ್ಗೆ ತಲುಪಿದ್ದರು.
Next Story