ಲೀಡ್ಸ್, ಜು.17: ಪ್ರವಾಸಿ ಭಾರತ ವಿರುದ್ಧದ ಮೂರನೇ ಏಕದಿನ ಅಂತರ್ ರಾಷ್ಟ್ರೀಯ ಪಂದ್ಯದಲ್ಲಿ ಇಂಗ್ಲೆಂಡ್ 8 ವಿಕೆಟ್ ಗಳ ಜಯ ಗಳಿಸಿದ್ದು, ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿದೆ. ಗೆಲುವಿಗೆ 257 ರನ್ ಗಳಿಸಬೇಕಿದ್ದ  ಇಂಗ್ಲೆಂಡ್  44.3 ಓವರ್ ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 260 ರನ್ ಗಳಿಸಿತು. ಜೋ ರೂಟ್  ಔಟಾಗದೆ ಶತಕ (100) ಮತ್ತು ನಾಯಕ ಇಯಾನ್ ಮೊರ್ಗನ್  ಔಟಾಗದೆ 88 ರನ್ ಗಳಿಸಿದರು . ಇವರು ಮೂರನೇ ವಿಕೆಟ್ ಗೆ ಮುರಿಯದ ಜೊತೆಯಾಟದಲ್ಲಿ 186 ರನ್ ಗಳಿಸಿದರು. ಜೇಮ್ಸ್ ವಿನ್ಸ್ 27 ರನ್ ಮತ್ತು ಜೋನಿ ಬೈರ್ ಸ್ಟೋವ್ 30 ರನ್ ಗಳಿಸಿ ಔಟಾದರು.