ಸೊಟೆವಿಲ್ಲೆ ಕ್ರೀಡಾಕೂಟ: ನೀರಜ್ ಚೋಪ್ರಾಗೆ ಚಿನ್ನ
ಸೊಟೆವಿಲ್ಲೆ, ಜು.18: ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಫ್ರಾನ್ಸ್ ನ ಸೊಟೆವಿಲ್ಲೆ ಯಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಚಿನ್ನ ಪಡೆದಿದ್ದಾರೆ.
ಚೋಪ್ರಾ 85.17 ಮೀಟರ್ ದೂರಕ್ಕೆ ಜಾವಲಿನ್ ಎಸೆದು ಚಿನ್ನ ಗಳಿಸಿದರು. ಮೊಲ್ಡೊವಾದ ಆಂಡ್ರಿಯನ್ ಮಾರ್ಡೆರೆ 81.48 ಮೀಟರ್ ಸಾಧನೆಯೊಂದಿಗೆ ಬೆಳ್ಳಿ ಮತ್ತು ಲಿಥುವೇನಿಯದ ಎಡಿಸ್ ಮ್ಯಾಟುಸೆವಿಶಿಯಸ್ (79.31 ಮೀ) ಕಂಚು ಪಡೆದರು.
Next Story