ಮೂರನೇ ಟೆಸ್ಟ್: ಶತಕ ವಂಚಿತ ಕೊಹ್ಲಿ,ಭಾರತ 294/5
ಟ್ರೆಂಟ್ಬ್ರಿಡ್ಜ್, ಆ.18: ಇಂಗ್ಲೆಂಡ್ ವಿರುದ್ಧ ಶನಿವಾರ ಆರಂಭವಾದ ಮೂರನೇ ಟೆಸ್ಟ್ನ ಮೊದಲ ದಿನದಾಟದಲ್ಲಿ ಭಾರತ ನಾಯಕ ವಿರಾಟ್ ಕೊಹ್ಲಿ ಕೇವಲ 3 ರನ್ನಿಂದ 23ನೇ ಶತಕ ವಂಚಿತರಾದರು.
ಭಾರತ 82 ರನ್ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಉಪ ನಾಯಕ ಅಜಿಂಕ್ಯ ರಹಾನೆ(81) ಅವರೊಂದಿಗೆ 4ನೇ ವಿಕೆಟ್ಗೆ 159 ರನ್ ಜೊತೆಯಾಟ ನಡೆಸಿದ ಕೊಹ್ಲಿ ತಂಡವನ್ನು ಆಧರಿಸಿದರು.
76ನೇ ಓವರ್ನ ಕೊನೆಯ ಎಸೆತದಲ್ಲಿ ಸ್ಪಿನ್ನರ್ ರಶೀದ್ ಎಸೆತದಲ್ಲಿ ಸ್ಪಿಪ್ನಲ್ಲಿದ್ದ ಸ್ಟೋಕ್ಸ್ಗೆ ಸುಲಭ ಕ್ಯಾಚ್ ನೀಡಿದ ಕೊಹ್ಲಿ ಶತಕ ವಂಚಿತರಾದರು. ಕೊಹ್ಲಿ ಔಟಾಗುವ ಮೊದಲು 152 ಎಸೆತಗಳಲ್ಲಿ 11 ಬೌಂಡರಿ ಬಾರಿಸಿದರು.
ಭಾರತ 81 ಓವರ್ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 294 ರನ್ ಗಳಿಸಿದೆ. ಹಾರ್ದಿಕ್ ಪಾಂಡ್ಯ(14) ಹಾಗೂ ರಿಷಭ್ ಪಂತ್(13) ಕ್ರೀಸ್ ಕಾಯ್ದುಕೊಂಡಿದ್ದಾರೆ.
ಕ್ರಿಸ್ ವೋಕ್ಸ್(75ಕ್ಕೆ3) ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ.
Next Story