ಹಾಕಿ: ಭಾರತಕ್ಕೆ ಹ್ಯಾಟ್ರಿಕ್ ಜಯ
ಜಕಾರ್ತ, ಆ.25: ಭಾರತದ ಪುರುಷರ ಹಾಕಿ ತಂಡ ಏಶ್ಯಾಗೇಮ್ಸ್ನ ‘ಎ’ಗುಂಪಿನ ತನ್ನ 3ನೇ ಪಂದ್ಯದಲ್ಲಿ ಜಪಾನ್ ವಿರುದ್ಧ 8-0 ಗೋಲುಗಳ ಅಂತರದಿಂದ ಜಯ ಸಾಧಿಸಿ ಅಜೇಯ ದಾಖಲೆ ಕಾಯ್ದುಕೊಂಡಿತು. ಈ ಮೂಲಕ ಗೇಮ್ಸ್ನಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿತು.
ಇಂಡೋನೇಶ್ಯಾ(17-0) ಹಾಗೂ ಹಾಂಕಾಂಗ್(26-0)ವಿರುದ್ಧ ಗೋಲುಗಳ ಸುರಿಮಳೆಗೈದಿದ್ದ ಭಾರತದ ಪರ ಶುಕ್ರವಾರ ನಡೆದ ಪಂದ್ಯದಲ್ಲಿ ರೂಪಿಂದರ್ ಪಾಲ್ ಸಿಂಗ್(17ನೇ,37ನೇ ನಿಮಿಷ), ಮನ್ದೀಪ್ ಸಿಂಗ್(32ನೇ, 55ನೇ ನಿ.) ತಲಾ ಎರಡು ಗೋಲುಗಳನ್ನು ಬಾರಿಸಿದರು. ಕನ್ನಡಿಗ ಸುನೀಲ್(7ನೇ ನಿಮಿಷ), ದಿಲ್ಪ್ರೀತ್(12ನೇ ನಿ.), ಆಕಾಶ್ದೀಪ್(46ನೇ ನಿ.) ಹಾಗೂ ವಿವೇಕ್(47ನೇ ನಿಮಿಷ)ತಲಾಒಂದು ಗೋಲು ಬಾರಿಸಿದರು. ಗೇಮ್ಸ್ನಲ್ಲಿ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿರುವ ಭಾರತ ಚಿನ್ನ ಜಯಿಸಿ ಒಲಿಂಪಿಕ್ಸ್ಗೆ ಅರ್ಹತೆ ಪಡೆಯಲು ಎದುರು ನೋಡುತ್ತಿದೆ.
Next Story