ತಂಡವನ್ನು ಸೇರಿಕೊಂಡ ಪೃಥ್ವಿ ಶಾ, ಹನುಮ ವಿಹಾರಿ
ಹೊಸದಿಲ್ಲಿ, ಆ.26: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಹೊಸದಾಗಿ ಸೇರ್ಪಡೆಗೊಂಡಿರುವ ಪೃಥ್ವಿ ಶಾ ಮತ್ತು ಹನುಮ ವಿಹಾರಿ ಶನಿವಾರ ತಂಡದ ಜೊತೆ ಅಭ್ಯಾಸ ನಡೆಸಿದರು. ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಆಗಸ್ಟ್ 30ರಿಂದ ಆರಂಭವಾಗಲಿದೆ. ಕೋಚ್ ರವಿಶಾಸ್ತ್ರಿ, ವಿಶ್ರಾಂತಿ, ಕಡಿಮೆ ಅಭ್ಯಾಸ, ಎಂಬ ಧ್ಯೇಯವನ್ನು ಪಾಲಿಸುತ್ತಿದ್ದು ಇದರಿಂದ ತಂಡಕ್ಕೆ ಪ್ರಸಕ್ತ ಟೆಸ್ಟ್ ಪಂದ್ಯದಲ್ಲಿ ಬಹಳಷ್ಟು ಪ್ರಯೋಜನವಾಗಿದೆ. ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಮುಗ್ಗರಿಸಿದ್ದ ಟೀಂ ಇಂಡಿಯಾ ಮೂರನೇ ಟೆಸ್ಟ್ನಲ್ಲಿ ತಿರುಗೇಟು ನೀಡಿದ್ದು, ಆಂಗ್ಲರಿಗೆ ಸೋಲಿನ ರುಚಿ ತೋರಿಸಿತ್ತು.
Next Story