ಭಾರತ ಮಹಿಳಾ ಹಾಕಿ ತಂಡಕ್ಕೆ ಜಯ
ರಾಣಿ ಹ್ಯಾಟ್ರಿಕ್ ಗೋಲು
ಜಕಾರ್ತ, ಆ.27: ನಾಯಕಿ ರಾಣಿ ರಾಂಪಾಲ್ ದಾಖಲಿಸಿದ ‘ಹ್ಯಾಟ್ರಿಕ್’ ಗೋಲು ನೆರವಿನಿಂದ ಭಾರತದ ಮಹಿಳೆಯರ ತಂಡ ಏಶ್ಯನ್ ಗೇಮ್ಸ್ನ ಹಾಕಿ ಪಂದ್ಯದಲ್ಲಿ ಥಾಯ್ಲೆಂಡ್ ತಂಡವನ್ನು 5-0 ಅಂತರದಿಂದ ಮಣಿಸಿದೆ.
ಸೋಮವಾರ ನಡೆದ ಪಂದ್ಯದಲ್ಲಿ ಭಾರತ ಮೊದಲೆರಡು ಕ್ವಾರ್ಟರ್ನಲ್ಲಿ ಗೋಲು ಬಾರಿಸಲು ವಿಫಲವಾಯಿತು. ಆ ನಂತರ ಐದು ಗೋಲುಗಳನ್ನು ಬಾರಿಸಿತು.
ರಾಣಿ ರಾಂಪಾಲ್(37ನೇ, 46ನೇ, 56ನೇ ನಿಮಿಷ)ಮೂರು ಗೋಲುಗಳನ್ನು ಬಾರಿಸಿದರೆ, ಮೊನಿಕಾ(52ನೇ ನಿಮಿಷ) ಹಾಗೂ ನವಜೋತ್ ಕೌರ್(55ನೇ ನಿ.)ತಲಾ ಒಂದು ಗೋಲು ದಾಖಲಿಸಿ ಭಾರತಕ್ಕೆ ಸತತ ನಾಲ್ಕನೇ ಗೆಲುವು ತಂದುಕೊಟ್ಟರು.
ಗೇಮ್ಸ್ನಲ್ಲಿ ಅಜೇಯ ಗೆಲುವು ದಾಖಲೆ ಕಾಯ್ದುಕೊಂಡಿರುವ ಭಾರತ ಮಹಿಳಾ ಹಾಕಿ ತಂಡ ‘ಬಿ’ ಗುಂಪಿನಲ್ಲಿ 4 ಪಂದ್ಯಗಳಲ್ಲಿ 12 ಅಂಕ ಗಳಿಸಿದೆ. ಹಾಲಿ ಚಾಂಪಿಯನ್ ದಕ್ಷಿಣ ಕೊರಿಯಾಗಿಂತ ಮುಂದಿದೆ. ಭಾರತ ತಂಡ ಕೊರಿಯಾವನ್ನು 4-1 ರಿಂದ ಮಣಿಸುವುದರೊಂದಿಗೆ ಈಗಾಗಲೇ ಸೆಮಿ ಫೈನಲ್ ಸ್ಥಾನ ಗಿಟ್ಟಿಸಿಕೊಂಡಿದೆ.
Next Story