ಭಾರತದ ಟಿಟಿ ತಂಡಕ್ಕೆ ಪದಕ ಖಚಿತ
ಜಕಾರ್ತ,ಆ.27: ಜಪಾನ್ ತಂಡವನ್ನು 3-1 ಅಂತರದಿಂದ ಮಣಿಸಿದ ಭಾರತದ ಪುರುಷರ ಟೇಬಲ್ ಟೆನಿಸ್ ತಂಡ ಏಶ್ಯನ್ ಗೇಮ್ಸ್ ಇತಿಹಾಸದಲ್ಲಿ ಮೊದಲ ಬಾರಿ ಪದಕವನ್ನು ಖಚಿತಪಡಿಸಿದೆ. 1958ರ ಏಶ್ಯನ್ ಗೇಮ್ಸ್ನಲ್ಲಿ ಟೇಬಲ್ ಟೆನಿಸ್ ಆರಂಭವಾದ ಬಳಿಕ ಭಾರತ ಈತನಕ ಪದಕವನ್ನೇ ಜಯಿಸಿಲ್ಲ. ಚೀನಾ(61ಚಿನ್ನ), ಜಪಾನ್(20) ಹಾಗೂ ದಕ್ಷಿಣ ಕೊರಿಯಾ(10) ದೀರ್ಘ ಕಾಲದಿಂದ ಪದಕವನ್ನು ಜಯಿಸುತ್ತಾ ಬಂದಿವೆ. ಸೋಮವಾರ ನಡೆದ ಪಂದ್ಯದಲ್ಲಿ ಶರತ್ ಕಮಲ್ ಜಪಾನ್ನ ಕೆಂಟಾ ಮಟ್ಸುಡೈರಾರನ್ನು 11-8, 12-10, 11-8 ಅಂತರದಿಂದ ಸೋಲಿಸಿದರು.
ರವಿವಾರ 39ನೇ ರ್ಯಾಂಕಿನ ಸತ್ಯನ್ 28ನೇ ರ್ಯಾಂಕಿನ ಉಯೆಡಾ ಹಾಗೂ ಮಟ್ಸುಡೈನಾ ವಿರುದ್ಧ ಆಡಿದ ಎರಡೂ ಸಿಂಗಲ್ಸ್ ಪಂದ್ಯಗಳನ್ನು ನೇರ ಗೇಮ್ಗಳಿಂದ ಗೆದ್ದುಕೊಂಡಿದ್ದರು.
Next Story