ಏಶ್ಯನ್ ಗೇಮ್ಸ್: ಭಾರತದ ಪುರುಷರ 4x400 ರಿಲೇ ತಂಡಕ್ಕೆ ಬೆಳ್ಳಿ
ಜಕಾರ್ತ, ಆ.30: ಭಾರತದ ಪುರುಷರ 4x400 ರಿಲೇ ತಂಡ ಏಶ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದೆ.
ಗೇಮ್ಸ್ನ 12ನೇ ದಿನವಾದ ಗುರುವಾರ ಮುಹಮ್ಮದ್ ಕುನ್ಹು, ಧಾರುನ್ ಅಯ್ಯಸ್ವಾಮಿ, ಮುಹಮ್ಮದ್ ಅನಸ್ ಹಾಗೂ ರಾಜೀವ್ ಅರೋಕಿಯಾ ಅವರನ್ನೊಳಗೊಂಡ ಭಾರತದ ರಿಲೇ ತಂಡ ಫೈನಲ್ ನಲ್ಲಿ 3:01.85 ಸೆಕೆಂಡ್ನಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆಯಿತು.
3:00.56 ಸೆಕೆಂಡ್ನಲ್ಲಿ ಗುರಿ ತಲುಪಿ ಏಶ್ಯಾ ಗೇಮ್ಸ್ನಲ್ಲಿ ದಾಖಲೆ ನಿರ್ಮಿಸಿದ ಕತರ್ ತಂಡ ಮೊದಲ ಸ್ಥಾನವನ್ನು ಪಡೆದರೆ, ಜಪಾನ್ ತಂಡ(3:01.94 ಸೆ.)ಕಂಚಿಗೆ ತೃಪ್ತಿಪಟ್ಟುಕೊಂಡಿತು.
Next Story