ಶರತ್ ಕ್ವಾರ್ಟರ್ ಫೈನಲ್ಗೆ ಲಗ್ಗೆ
ಜಕಾರ್ತ, ಆ.30: ಏಶ್ಯನ್ ಗೇಮ್ಸ್ನ ಟೇಬಲ್ ಟೆನಿಸ್ನ ಪುರುಷರ ಸಿಂಗಲ್ಸ್ ನಲ್ಲಿ ಶರತ್ ಕಮಲ್ ಪ್ರಿ-ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದ್ದಾರೆ. ಇಲ್ಲಿ ಗುರುವಾರ ನಡೆದ 32ನೇ ಸುತ್ತಿನ ಪಂದ್ಯದಲ್ಲಿ ಕಮಲ್ ಪಾಕಿಸ್ತಾನದ ಮುಹಮ್ಮದ್ ಆಸಿಮ್ ಕುರೇಶಿ ವಿರುದ್ಧ 11-4, 11-8, 11-7, 11-5 ಅಂತರದಿಂದ ಗೆಲುವು ಸಾಧಿಸಿದರು. ಶರತ್ ಏಶ್ಯನ್ ಗೇಮ್ಸ್ನಲ್ಲಿ ಈಗಾಗಲೇ ಎರಡು ಪದಕಗಳನ್ನು ಜಯಿಸಿದ್ದಾರೆ. ಪುರುಷರ ಟೀಮ್ ಇವೆಂಟ್ನಲ್ಲಿ ಐತಿಹಾಸಿಕ ಕಂಚಿನ ಪದಕ ಜಯಿಸಿದ್ದ ಶರತ್ ಮಿಕ್ಸೆಡ್ ಟೀಮ್ ಇವೆಂಟ್ನಲ್ಲಿ ಮಣಿಕಾ ಬಾತ್ರಾ ಜೊತೆಗೂಡಿ ಮತ್ತೊಂದು ಕಂಚು ಜಯಿಸಿದ್ದರು.
► ಬಾತ್ರಾ ಪ್ರಿ- ಕ್ವಾರ್ಟರ್ಗೆ
ಏಶ್ಯನ್ ಗೇಮ್ಸ್ನ ಮಹಿಳೆಯ ಸಿಂಗಲ್ಸ್ ಸ್ಕ್ವಾಷ್ ಸ್ಪರ್ಧೆಯಲ್ಲಿ ಮಣಿಕಾ ಬಾತ್ರಾ ಅಂತಿಮ-16ರ ಸುತ್ತಿಗೆ ತೇರ್ಗಡೆಯಾದರು. ಗುರುವಾರ ನಡೆದ ಅಂತಿಮ-32ರ ಪಂದ್ಯದಲ್ಲಿ ಬಾತ್ರಾ ಥಾಯ್ಲೆಂಡ್ನ ನಂಥಾನಾ ಕೊಮ್ವಾಂಗ್ರನ್ನು 11-3, 11-7, 11-3 ,11-6 ಅಂತರದಿಂದ ಸೋಲಿಸಿದ್ದಾರೆ.
Next Story