ಏಶ್ಯನ್ ಗೇಮ್ಸ್: ಬ್ರಿಡ್ಜ್ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನ
ಜಕಾರ್ತ, ಸೆ.1: ಏಶ್ಯನ್ ಗೇಮ್ಸ್ನ ಬ್ರಿಡ್ಜ್ ಸ್ಪರ್ಧೆಯ ಪುರುಷರ ಟೀಮ್ ಇವೆಂಟ್ನಲ್ಲಿ ಭಾರತ ಚಿನ್ನ ಗೆದ್ದುಕೊಂಡಿದೆ.
60ರ ವರ್ಷದ ಪ್ರಣಬ್ ಬರ್ಧನ್ ಹಾಗೂ 56 ವರ್ಷದ ಶಿಭ್ನಾಥ್ ಸರ್ಕಾರ್ ಏಶ್ಯನ್ ಗೇಮ್ಸ್ನ 14ನೇ ದಿನವಾದ ಶನಿವಾರ ನಡೆದ ಫೈನಲ್ ಸುತ್ತಿನಲ್ಲಿ ಒಟ್ಟು 384 ಅಂಕ ಗಳಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡರು.
ಇದೇ ಇವೆಂಟ್ನಲ್ಲಿ ಭಾರತದ ಇತರ ಎರಡು ತಂಡಗಳು ಸ್ಪರ್ಧೆಯಲ್ಲಿದ್ದವು. ಸುಮಿತ್ ಮುಖರ್ಜಿ ಹಾಗೂ ದೇಬಬೃತ ಮಜುಂದಾರ್ ಒಟ್ಟು 333 ಅಂಕ ಗಳಿಸಿ 9ನೇ ಸ್ಥಾನ ಪಡೆದಿದ್ದಾರೆ. ಸುಭಾಶ್ ಗುಪ್ತಾ ಹಾಗೂ ಸಪ್ನಾ ದೇಸಾಯಿ 12ನೇ ಸ್ಥಾನ ಪಡೆದಿದ್ದಾರೆ.
ಇದೇ ಮೊದಲ ಬಾರಿ ಕಾರ್ಡ್ಗಳ ಗೇಮ್ ಬ್ರಿಡ್ಜ್ ಸ್ಪರ್ಧೆಯನ್ನು ಏಶ್ಯನ್ ಗೇಮ್ಸ್ನಲ್ಲಿ ಸೇರ್ಪಡೆಗೊಳಿಸಲಾಗಿದ್ದು ಭಾರತವನ್ನು 24 ಸದಸ್ಯರ ತಂಡ ಪ್ರತಿನಿಧಿಸುತ್ತಿದೆ. ಭಾರತ ಈಗಾಗಲೇ ಪುರುಷರ ಹಾಗೂ ಮಿಕ್ಸೆಡ್ ಟೀಮ್ ಇವೆಂಟ್ನಲ್ಲಿ ಕಂಚಿನ ಪದಕ ಜಯಿಸಿದೆ.
Next Story