ಅರ್ಪಿಂದರ್ ಸಿಂಗ್ ಐತಿಹಾಸಿಕ ಸಾಧನೆ
ಕಾಂಟಿನೆಂಟಲ್ ಕಪ್
ಒಸ್ಟ್ರಾವಾ(ಝೆಕ್ ಗಣರಾಜ್ಯ), ಸೆ.9: ಟ್ರಿಪಲ್ ಜಂಪ್ ಪಟು ಅರ್ಪಿಂದರ್ ಸಿಂಗ್ ಐಎಎಎಫ್ ಕಾಂಟಿನೆಂಟಲ್ ಕಪ್ನಲ್ಲಿ ಪದಕ ಜಯಿಸಿದ ಮೊದಲ ಭಾರತೀಯ ಅಥ್ಲೀಟ್ ಎನಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದರು.
ರವಿವಾರ ನಡೆದ ಸೆಮಿ ಫೈನಲ್ ಸ್ಪರ್ಧೆಯಲ್ಲಿ ತನ್ನ ಮೊದಲ ಪ್ರಯತ್ನದಲ್ಲಿ 16.59 ಮೀ.ದೂರಕ್ಕೆ ಜಿಗಿದು ಕಂಚಿನ ಪದಕ ಪಡೆದರು. ಆದರೆ, ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಕಳಪೆ ಪ್ರದರ್ಶನ ನೀಡಿ 6ನೇ ಸ್ಥಾನ ಪಡೆದರು. ಅರ್ಪಿಂದರ್ ಇತ್ತೀಚೆಗೆ ಜಕಾರ್ತದಲ್ಲಿ ನಡೆದಿದ್ದ ಏಶ್ಯನ್ ಗೇಮ್ಸ್ನಲ್ಲಿ ಚಿನ್ನ ಜಯಿಸಿದ್ದರು. ಕಾಂಟಿನೆಂಟಲ್ ಕಪ್ನಲ್ಲಿ ಈತನಕ ಭಾರತದ ಅಥ್ಲೀಟ್ಗಳು ಪದಕ ಜಯಿಸಿಲ್ಲ.A²ìí¨ÜÃ… ÔíW…
Next Story