ತಂದೆಯ ಹೃದಯ ಗೆದ್ದ ಹಾರ್ದಿಕ್ ಪಾಂಡ್ಯ
ಅಹ್ಮದಾಬಾದ್, ಸೆ.15: ಭಾರತದ ಅಲ್ರೌಂಡರ್ ಹಾರ್ದಿಕ್ ಪಾಂಡ್ಯ ಇಂಗ್ಲೆಂಡ್ನಲ್ಲಿ ಇತ್ತೀಚೆಗೆ ಕೊನೆಗೊಂಡ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿ ಎಲ್ಲೆಡೆ ಟೀಕೆಗೆ ಗುರಿಯಾಗಿದ್ದರು. ಆದರೆ, ತನ್ನ ತಂದೆಗೆ ಅಚ್ಚರಿ ನೀಡುವ ಜೊತೆಗೆ ಅವರ ಹೃದಯ ಗೆದ್ದಿದ್ದಾರೆ. ಸುಮಾರು ಮೂರು ತಿಂಗಳ ಬಳಿಕ ಮನೆಗೆ ವಾಪಸಾದ ಹಾರ್ದಿಕ್ ಸೀದಾ ತನ್ನ ತಂದೆ ಮಲಗಿದ್ದ ಕೋಣೆಗೆ ತೆರಳಿ ಅವರು ಹೊದ್ದ ಹೊದಿಕೆಯನ್ನು ತೆಗೆದು ತಂದೆಯನ್ನು ಬಿಗಿದಪ್ಪಿಕೊಂಡರು. ತನ್ನ ಬರುವಿಕೆಯ ಬಗ್ಗೆ ಮಾಹಿತಿ ನೀಡದ ಪಾಂಡ್ಯ ಬೆಳ್ಳಂಬೆಳಗ್ಗೆ ತಂದೆಗೆ ಅಚ್ಚರಿ ನೀಡಿದರು. ತಂದೆಯೊಂದಿಗೆ ಅಚ್ಚರಿ ಭೇಟಿಯಾದ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಾರ್ದಿಕ್ ಹಂಚಿಕೊಂಡಿದ್ದಾರೆ. ಹಾರ್ದಿಕ್ ತನ್ನ ತಂದೆಗೆ ಅಚ್ಚರಿ ಮೂಡಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಆಗಸ್ಟ್ ನಲ್ಲಿ ತನ್ನ ತಂದೆಗೆ ವಾಹನವನ್ನು ಉಡುಗೊರೆಯಾಗಿ ನೀಡಿದ್ದರು. ಈ ವಿಚಾರವನ್ನು ಟ್ವಿಟರ್ನ ಮೂಲಕ ಬಹಿರಂಗಪಡಿಸಿದ್ದರು.
Next Story