ಚೀನಾ ಓಪನ್: ಸಿಂಧು ಪ್ರಿ-ಕ್ವಾರ್ಟರ್ ಫೈನಲ್ಗೆ, ಸೈನಾಗೆ ಸೋಲು
ಚಾಂಗ್ಝೌ, ಸೆ.18: ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್ನಲ್ಲಿ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಮಂಗಳವಾರ ಇಲ್ಲಿ ಆರಂಭವಾದ ಚೀನಾ ಓಪನ್ನಲ್ಲಿ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಆದರೆ, ಹಿರಿಯ ಆಟಗಾರ್ತಿ ಸೈನಾ ನೆಹ್ವಾಲ್ ಮೊದಲ ಸುತ್ತಿನಲ್ಲೇ ಸೋತು ಕೂಟದಿಂದ ಹೊರ ನಡೆದಿದ್ದಾರೆ.
ಮಹಿಳೆಯರ ಸಿಂಗಲ್ಸ್ನ ಮೊದಲ ಸುತ್ತಿನ ಪಂದ್ಯದಲ್ಲಿ 3ನೇ ಶ್ರೇಯಾಂಕದ ಸಿಂಧು ಜಪಾನ್ನ 39ನೇ ರ್ಯಾಂಕಿನ ಆಟಗಾರ್ತಿ ಸಯೆನಾ ಕವಾಕಮಿ ವಿರುದ್ಧ 21-15, 21-13 ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಇದೇ ವೇಳೆ, ಎರಡು ಬಾರಿಯ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಸೈನಾ ನೆಹ್ವಾಲ್ ಕೊರಿಯಾ ಆಟಗಾರ್ತಿ ಸಂಗ್ಜಿ ಯಿಯುನ್ ವಿರುದ್ಧ 48 ನಿಮಿಷಗಳ ಕಾಲ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ 20-20, 8-21, 14-21 ಅಂತರದಿಂದ ಸೋತಿದ್ದಾರೆ.
Next Story