ಏಶ್ಯಕಪ್: ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ದುಬೈ,ಸೆ.19: ಏಶ್ಯಕಪ್ ಟೂರ್ನಮೆಂಟ್ನ ಏಕದಿನ ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 8 ವಿಕೆಟ್ಗಳ ಭರ್ಜರಿ ಜಯ ಗಳಿಸಿದೆ.
ದುಬೈ ಇಂಟರ್ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 163 ರನ್ಗಳ ಸವಾಲನ್ನು ಪಡೆದಿದ್ದ ಭಾರತ 29 ಓವರ್ಗಳಲ್ಲಿ 2 ವಿಕೆಟ್ ನಷ್ಟದಲ್ಲಿ164 ರನ್ ಗಳಿಸಿತು.
ಟೀಮ್ ಇಂಡಿಯಾದ ಆರಂಭಿಕ ದಾಂಡಿಗರಾದ ನಾಯಕ ರೋಹಿತ್ ಶರ್ಮ 52 ರನ್(39ಎ, 6ಬೌ, 3ಸಿ) ಮತ್ತು ಶಿಖರ್ ಧವನ್ 46 ರನ್(54ಎ, 6ಬೌ,1ಸಿ ) ಗಳಿಸಿ ಗೆಲುವಿನ ಹಾದಿ ಸುಗಮ ಗೊಳಿಸಿದರು.
ಅಂಬಟಿ ರಾಯುಡು ಔಟಾಗದೆ 31ರನ್ ಮತ್ತು ದಿನೇಶ್ ಕಾರ್ತಿಕ್ ಔಟಾಗದೆ 31 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಪಾಕಿಸ್ತಾನ ಆಲೌಟ್ 162:ಟೀಮ್ ಇಂಡಿಯಾದ ಶಿಸ್ತುಬದ್ಧ ದಾಳಿಗೆ ಸಿಲುಕಿದ ಪಾಕಿಸ್ತಾನ 43.1 ಓವರ್ಗಳಲ್ಲಿ 162ಕ್ಕೆ ಆಲೌಟಾಗಿತ್ತು.
Next Story