ಏಶ್ಯಕಪ್: ಬಾಂಗ್ಲಾದೇಶ ಗೆಲುವಿಗೆ 256 ರನ್ ನೀಡಿದ ಅಫ್ಘಾನಿಸ್ತಾನ
ರಶೀದ್ ಖಾನ್, ಶಾಹಿದಿ ಅರ್ಧಶತಕ
ಅಬುಧಾಬಿ, ಸೆ.20: ಬಾಲಂಗೋಚಿ ರಶೀದ್ ಖಾನ್ ಬಿರುಸಿನ ಬ್ಯಾಟಿಂಗ್(ಔಟಾಗದೆ 57,32 ಎಸೆತ) ಹಾಗೂ ಮಧ್ಯಮ ಕ್ರಮಾಂಕದ ದಾಂಡಿಗ ಹಶ್ಮತುಲ್ಲಾ ಶಾಹಿದಿ ತಾಳ್ಮೆಯ ಅರ್ಧಶತಕದ(58,92 ಎಸೆತ) ನೆರವಿನಿಂದ ಅಫ್ಘಾನಿಸ್ತಾನ ತಂಡ ಬಾಂಗ್ಲಾದೇಶ ತಂಡಕ್ಕೆ ಏಶ್ಯಕಪ್ ಪಂದ್ಯ ಗೆಲುವಿಗೆ 256 ರನ್ ಗುರಿ ನೀಡಿದೆ.
ಟಾಸ್ ಜಯಿಸಿದ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಆಯ್ದುಕೊಂಡು ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 255 ರನ್ ಕಲೆ ಹಾಕಿತು.
ಅಫ್ಘಾನ್ ಎರಡನೇ ಓವರ್ನಲ್ಲಿ ಆರಂಭಿಕ ಆಟಗಾರ ಇನ್ಸಾವುಲ್ಲಾಹ್(8) ವಿಕೆಟನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಇನ್ನೋರ್ವ ಆರಂಭಿಕ ಆಟಗಾರ ಮುಹಮ್ಮದ್ ಶಾಝಾದ್(37,47 ಎಸೆತ,4 ಬೌಂಡರಿ) ಹಶ್ಮತುಲ್ಲಾ ಶಾಹಿದಿ(58,92 ಎಸೆತ, 3 ಬೌಂಡರಿ) ಅವರೊಂದಿಗೆ 3ನೇ ವಿಕೆಟ್ಗೆ 51 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಅಫ್ಘಾನ್ 160 ರನ್ಗೆ 7 ವಿಕೆಟ್ ಕಳೆದುಕೊಂಡಿತ್ತು. ಆಗ 8ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 95 ರನ್ ಸೇರಿಸಿದ ರಶೀದ್(57,32 ಎಸೆತ, 8 ಬೌಂಡರಿ,1ಸಿಕ್ಸರ್)ಹಾಗೂ ಗುಲ್ಬದಿನ್ ನೈಬ್(ಔಟಾಗದೆ 42, 38ಎಸೆತ, 5 ಬೌಂಡರಿ)ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು.
ಬಾಂಗ್ಲಾದ ಪರ ಶಾಕಿಬ್ ಅಲ್ ಹಸನ್(42ಕ್ಕೆ4) ಯಶಸ್ವಿ ಬೌಲರ್ ಎನಿಸಿಕೊಂಡರು. ಅಬು ಹೈದರ್(50ಕ್ಕೆ2)ಎರಡು ವಿಕೆಟ್ ಪಡೆದರು.