ವೀಲ್ಚೇರ್ ಕ್ರಿಕೆಟ್ ಸರಣಿ: ಪಾಕಿಸ್ತಾನ ವಿರುದ್ಧ ಭಾರತಕ್ಕೆ 9 ವಿಕೆಟ್ ಜಯ
ಹೊಸದಿಲ್ಲಿ, ಸೆ.24: ಭಾರತದ ವೀಲ್ಚೇರ್ ಕ್ರಿಕೆಟ್ ತಂಡ ಯುಎಇಯಲ್ಲಿನ ಅಜ್ಮಾನ್ನ ಎಂಸಿಸಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಾಕಿಸ್ತಾನ ವಿರುದ್ಧ ಫೈನಲ್ ಪಂದ್ಯದಲ್ಲಿ 9 ವಿಕೆಟ್ಗಳಿಂದ ಜಯ ದಾಖಲಿಸಿದೆ.
ಈ ಗೆಲುವಿನೊಂದಿಗೆ ಭಾರತ ತಂಡ ಇಂಡೋ-ಪಾಕ್ ವೀಲ್ಚೇರ್ ಕ್ರಿಕೆಟ್ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡು ಫ್ರೆಂಡ್ಶಿಪ್ ಕಪ್ನ್ನು ತನ್ನದಾಗಿಸಿಕೊಂಡಿದೆ.
ಕ್ರಿಕೆಟ್ ದಂತಕತೆಗಳಾದ ಸುನೀಲ್ ಗವಾಸ್ಕರ್, ವಸಿಂ ಅಕ್ರಂ,ಮದನ್ ಲಾಲ್, ಅಬ್ದುಲ್ ಖಾದರ್, ಆರ್.ಅಶ್ವಿನ್, ಮುತ್ತಯ್ಯ ಮುರಳೀಧರನ್, ಹರ್ಭಜನ್ ಸಿಂಗ್ ತಂಡ ಹಾಗೂ ಅಧಿಕಾರಿಗಳನ್ನು ಭೇಟಿಯಾಗಿ ತಂಡದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ಡಬ್ಲುಟಿಎ ಪ್ರಯತ್ನವನ್ನು ಶ್ಲಾಘಿಸಿದರು.
ಭಾರತದ ವೀಲ್ಚೇರ್ ಕ್ರಿಕೆಟ್ ತಂಡ ಢಾಕಾದಲ್ಲಿ ಮೇ 4 ರಿಂದ 8ರ ತನಕ ನಡೆದಿದ್ದ ಭಾರತ-ಬಾಂಗ್ಲಾದೇಶ ವೀಲ್ಚೇರ್ ಕ್ರಿಕೆಟ್ ಸರಣಿಯಲ್ಲಿ ಐತಿಹಾಸಿಕ ಜಯ ಸಾಧಿಸಿತ್ತು. ಬಾಂಗ್ಲಾದೇಶ ಪ್ರವಾಸದಲ್ಲಿ ಭಾರತದ ಮಾಜಿ ನಾಯಕ ಸಚಿನ್ ತೆಂಡುಲ್ಕರ್ ಮುಂದೆ ಬಂದು ಭಾರತ ತಂಡಕ್ಕೆ ನೆರವಿನ ಹಸ್ತ ಚಾಚಿದ್ದರು.