ಏಶ್ಯಕಪ್: ಭಾರತ ವಿರುದ್ಧ ಚೊಚ್ಚಲ ಶತಕ ಸಿಡಿಸಿದ ಅಫ್ಘಾನಿಸ್ತಾನದ ಶಾಝಾದ್
ದುಬೈ, ಸೆ.25: ಅಫ್ಘಾನಿಸ್ತಾನದ ಆರಂಭಿಕ ಆಟಗಾರ ಮುಹಮ್ಮದ್ ಶಾಝಾದ್ ಮಂಗಳವಾರ ಇಲ್ಲಿ ನಡೆದ ಏಶ್ಯಕಪ್ನ ಸೂಪರ್-4 ಪಂದ್ಯದಲ್ಲಿ ಭಾರತ ವಿರುದ್ಧ ಚೊಚ್ಚಲ ಶತಕ ಸಿಡಿಸಿ ಗಮನ ಸೆಳೆದರು.
76ನೇ ಏಕದಿನ ಪಂದ್ಯವನ್ನಾಡಿದ ವಿಕೆಟ್ಕೀಪರ್-ಬ್ಯಾಟ್ಸ್ಮನ್ ಶಾಝಾದ್ 5ನೇ ಶತಕ ದಾಖಲಿಸಿದರು.
28.1ನೇ ಓವರ್ನಲ್ಲಿ ಚೊಚ್ಚಲ ಪಂದ್ಯವನ್ನಾಡಿದ ದೀಪಕ್ ಚಹಾರ್ ಎಸೆತವನ್ನು ಬೌಂಡರಿಗೆ ಅಟ್ಟಿದ ಶಾಝಾದ್ ಶತಕ ಪೂರೈಸಿದರು. ಶಾಝಾದ್ 88 ಎಸೆತಗಳಲ್ಲಿ 10 ಬೌಂಡರಿ ಹಾಗೂ 6 ಸಿಕ್ಸರ್ಗಳ ಸಹಾಯದಿಂದ 100 ರನ್ ಪೂರೈಸಿದರು.
Next Story