6ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ಗೆ ರವಿವಾರ ಚಾಲನೆ
ಮೊದಲ ಪಂದ್ಯದಲ್ಲಿ ಚೆನ್ನೈ-ಪಾಟ್ನಾ ಸೆಣಸಾಟ
ಚೆನ್ನೈ, ಅ.6: ಆರನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಚೆನ್ನೈನಲ್ಲಿ ರವಿವಾರ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈನ ತಮಿಳ್ ತಲೈವಾಸ್ ತಂಡ ಪಾಟ್ನಾ ಪೈರಟ್ಸ್ ತಂಡವನ್ನು ಎದುರಿಸಲಿದೆ.
ದಿನದ 2ನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡ ಯು ಮುಂಬಾ ತಂಡವನ್ನು ಎದುರಿಸಲಿದೆ.
ಈ ವರ್ಷದ ಕಬಡ್ಡಿ ಆಟಗಾರರ ಹರಾಜಿನಲ್ಲಿ ಮೋನು ಗೊಯಟ್ 1.51 ಕೋ.ರೂ.ಗೆ ಹರ್ಯಾಣ ಸ್ಟೀಲರ್ಸ್ ತಂಡದ ಪಾಲಾದರು. ಈಮೂಲಕ ಅತ್ಯಂತ ದುಬಾರಿ ಕಬಡ್ಡಿ ಆಟಗಾರ ಎನಿಸಿಕೊಂಡರು. ರಾಹುಲ್ ಚೌಧರಿ, ನಿತಿನ್ ಥೋಮರ್ ಹಾಗೂ ಇರಾನ್ನ ಫಝೆಲ್ ಅಟ್ರಚಲಿ ಕೋಟಿ ರೂ.ಗೆ ಹರಾಜಾದರು.
ಚೆನ್ನೈನಲ್ಲಿ ಮೊದಲ ಚರಣದ ಕಬಡ್ಡಿ ಲೀಗ್ ನಡೆದ ಬಳಿಕ ಸೋನಿಪತ್, ಪುಣೆ, ಪಾಟ್ನಾ, ಗ್ರೇಟರ್ ನೊಯ್ಡಾ, ಮುಂಬೈ, ಅಹ್ಮದಾಬಾದ್, ಬೆಂಗಳೂರು ಹಾಗೂ ದಿಲ್ಲಿಯಲ್ಲಿ ನಡೆಯಲಿದೆ.
ರವಿವಾರದ ಪಂದ್ಯಗಳು
ತಮಿಳ್ ತಲೈವಾಸ್-ಪಾಟ್ನಾ ಪೈರಟ್ಸ್
ಸ್ಥಳ: ಚೆನ್ನೈ, ಸಮಯ: ರಾತ್ರಿ: 8:00
ಪುಣೇರಿ ಪಲ್ಟನ್-ಯೂ ಮುಂಬಾ
ಸ್ಥಳ: ಚೆನ್ನೈ, ಸಮಯ: ರಾತ್ರಿ 9:00
Next Story