ಸೌರಭ್ ಚೌಧರಿಗೆ ಚಿನ್ನ
ಬ್ಯುನಸ್ ಐರಿಸ್, ಅ.10: ಯೂತ್ ಒಲಿಂಪಿಕ್ಸ್ ಗೇಮ್ಸ್ನ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಸೌರಭ್ ಚೌಧರಿ ಚಿನ್ನ ಬಾಚಿಕೊಂಡಿದ್ದಾರೆ.
16 ಹರೆಯದ ಚೌಧರಿ ಬುಧವಾರ ನಡೆದ ಫೈನಲ್ನಲ್ಲಿ 244.2 ಪಾಯಿಂಟ್ಸ್ ದಾಖಲಿಸಿ ಚಿನ್ನ ಪಡೆದರು.
ದಕ್ಷಿಣ ಕೊರಿಯಾದ ಸಂಗ್ ಯುನೋ (236.7) ಬೆಳ್ಳಿ ಮತ್ತು ಸ್ವಿಟ್ಝರ್ರ್ಲೆಂಡ್ನ ಸೊಲಾರಿ ಜಾಸನ್(215.6 ) ಕಂಚು ಪಡೆದರು.
ಏಶ್ಯನ್ ಗೇಮ್ಸ್ ಮತ್ತು ಜೂನಿಯರ್ ಐಎಸ್ಎಸ್ಎಫ್ ವರ್ಲ್ಡ್ ಚಾಂಪಿಯನ್ ಚೌಧರಿ ಅರ್ಹತಾ ಸುತ್ತಿನಲ್ಲಿ 580 ಪಾಯಿಂಟ್ಸ್ ಕಲೆ ಹಾಕಿ ಅಗ್ರಸ್ಥಾನ ಪಡೆದಿದ್ದರು.
16 ಹರೆಯದ ಮನು ಭಾಕರ್ ಮಹಿಳೆಯರ ಪಿಸ್ತೂಲ್ನ್ಲ್ಲಿ ಮಂಗಳವಾರ ಚಿನ್ನ ಪಡೆದಿದ್ದರು. ಮೀರತ್ ಕಲಿನಾದ ಚೌಧರಿ ಭಾರತದ ಖಾತೆಗೆ ಇನ್ನೊಂದು ಚಿನ್ನ ಜಮೆ ಮಾಡಿದ್ದಾರೆ.
Next Story