ಹಿಜಾಬ್ ತೆಗೆಯಲು ನಿರಾಕರಿಸಿದ ತಪ್ಪಿಗೆ ಸ್ಪರ್ಧೆಯಿಂದ ಅನರ್ಹಗೊಳಿಸಿದರು !
ಏಶ್ಯನ್ ಪ್ಯಾರಾ ಗೇಮ್ಸ್
ಜಕಾರ್ತ, ಅ.10: ಏಶ್ಯನ್ ಪ್ಯಾರಾ ಗೇಮ್ಸ್ನಲ್ಲಿ ಜುಡೋ ಸ್ಪರ್ಧೆಯ ವೇಳೆ ಹಿಜಾಬ್ ತೆಗೆಯಲು ನಿರಾಕರಿಸಿದ ಕಾರಣಕ್ಕಾಗಿ ಇಂಡೋನೇಶ್ಯದ ಜುಡೋ ಪಟು ಮಿಫ್ತಾಹುಲ್ ಜನ್ನಾ ಎಂಬವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಿದ ಘಟನೆ ಬೆಳಕಿಗೆ ಬಂದಿದೆ.
21ರ ಹರೆಯದ ಮುಸ್ಲಿಂ ಜುಡೋ ಪಟು ಮುಫ್ತಾಹುಲ್ ದೃಷ್ಟಿ ಮಾಂದ್ಯ ಮಹಿಳೆಯರ 52 ಕೆ.ಜಿ. ವಿಭಾಗದ ಸ್ಪರ್ಧೆಗೆ ತಯಾರಾಗಿ ಬಂದಿದ್ದರು. ಸಂಘಟಕರು ಹಿಜಾಬ್ ತೆಗೆಯಲು ಕೇಳಿದಾಗ ಅವರು ನಿರಾಕರಿಸಿದರೆನ್ನಲಾಗಿದೆ. ಅಂತರ್ರಾಷ್ಟ್ರೀಯ ಜುಡೋ ಫೆಡರೇಶನ್ (ಐಜೆಎಫ್) ನಿಯಮ ಪ್ರಕಾರ ಜುಡೋ ಪಟು ಸ್ಪರ್ಧೆಯ ವೇಳೆ ‘‘ ತಲೆ ಯನ್ನು ಮುಚ್ಚಿರಬಾರದು. ವೈದ್ಯಕೀಯ ಕಾರಣದಿಂದಾಗಿ ಬ್ಯಾಂಡೇಜ್ ಕಟ್ಟಿದ್ದರೆ ವಿನಾಯತಿ ಇದೆ’’ .
ಮಿಫ್ತಾಹುಲ್ ಜನ್ನಾ ಅವರು ಹಿಜಾಬ್ ತೆಗೆಯಲು ಹಿನ್ನೆಲೆಯಲ್ಲಿ ನಿರಾಕರಿಸಿದ ಹಿನ್ನೆಲೆಯಲ್ಲಿ ಅವರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
Next Story