ವೃತ್ತಿಪರ ಫುಟ್ಬಾಲ್ ಆಟಗಾರನಾಗಿ ಕಣಕ್ಕಿಳಿಯಲಿರುವ ಉಸೇನ್ ಬೋಲ್ಟ್
ಸಿಡ್ನಿ, ಅ.10: ಜಮೈಕಾದ ಒಟದ ರಾಜ ಉಸೇನ್ ಬೋಲ್ಟ್ ಫುಟ್ಬಾಲ್ ಆಟಗಾರನಾಗಿ ರೂಪುಗೊಳ್ಳುತ್ತಿದ್ದಾರೆ.
ಇದೀಗ ಬೋಲ್ಟ್ ಸೆಂಟ್ರಲ್ ಕೋಸ್ಟ್ ಮ್ಯಾರಿನರ್ಸ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಬೋಲ್ಟ್ ಶುಕ್ರವಾರ ನಡೆಯಲಿರುವ ಸೆೆಂಟ್ರಲ್ ಕೋಸ್ಟ್ ಮ್ಯಾರಿನರ್ಸ್ ಮತ್ತು ಮ್ಯಾಕಾರ್ಥರ್ ಸೌತ್ ವೆಸ್ಟ್ ಯುನೈಟೆಡ್ ತಂಡಗಳ ನಡುವಿನ ಪ್ರದರ್ಶನ ಪಂದ್ಯದಲ್ಲಿ ಆಡಲಿದ್ದಾರೆ.
ವೃತ್ತಿಪರ ಫುಟ್ಬಾಲ್ ಆಟಗಾರನಾಗುವುದು ಬೋಲ್ಟ್ರ ಬಾಲ್ಯದ ಕನಸಾಗಿತ್ತು. ಸೌತ್ ವೆಸ್ಟ್ ಯುನೈಟೆಡ್ ತಂಡದ ವಿರುದ್ಧದ ಪ್ರದರ್ಶನ ಪಂದ್ಯ ಬೋಲ್ಟ್ರ ಭವಿಷ್ಯವನ್ನು ನಿರ್ಧರಿಸಲಿದೆ. ಬೋಲ್ಟ್ ಅವರು ಕೋಚ್ ಮೈಕ್ ಮುಲ್ವೆ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಬೋಲ್ಟ್ ಆಟದ ಬಗ್ಗೆ ಕೋಚ್ ಮೈಕ್ ಮುಲ್ವೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಬೋಲ್ಟ್ ಇದೀಗ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ.
ಒಲಿಂಪಿಕ್ಸ್ನಲ್ಲಿ ಎಂಟು ಚಿನ್ನ ಪಡೆದಿರುವ ಬೋಲ್ಟ್ ಫಿಟ್ನೆಸ್ ಕಡೆಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. 32ರ ಹರೆಯದ ಅವರು ಕಳೆದ ಆಗಸ್ಟ್ನಲ್ಲಿ ಫುಟ್ಬಾಲ್ಗೆ ಪಾದಾರ್ಪಣೆಗೈದಿದ್ದರು.