ಯೂತ್ ಒಲಿಂಪಿಕ್ಸ್ ಹಾಕಿ: ಅರ್ಜೆಂಟೀನ ವಿರುದ್ಧ ಭಾರತದ ವನಿತೆಯರಿಗೆ ಸೋಲು
ಬ್ಯುನಸ್ ಐರಿಸ್, ಅ.11: ಭಾರತದ ಅಂಡರ್-18 ವನಿತೆಯರ ಹಾಕಿ ತಂಡ ಇಲ್ಲಿ ನಡೆಯುತ್ತಿರುವ ಯೂತ್ ಒಲಿಂಪಿಕ್ಸ್ನ ಪಂದ್ಯದಲ್ಲಿ ಆತಿಥೇಯ ಅರ್ಜೆಂಟೀನ ವಿರುದ್ಧ 2-5 ಅಂತರದಲ್ಲಿ ಸೋಲು ಅನುಭವಿಸಿದೆ.
ಸತತ ಮೂರು ಪಂದ್ಯಗಳಲ್ಲಿ ಜಯ ಗಳಿಸಿದ ಭಾರತದ ವನಿತೆಯರ ತಂಡ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲ ಸೋಲು ಅನುಭವಿಸಿದೆ.
ಅರ್ಜೆಂಟೀನ ಸೆಲಿನಾ ಡಿ ಸಾಂಟೊ 7ನೇ ನಿಮಿಷದಲ್ಲಿ ಗೋಲು ಬಾರಿಸಿ ತಂಡದ ಗೋಲು ಖಾತೆ ತೆರೆದರು. 8ನೇ ನಿಮಿಷದಲ್ಲಿ ಭಾರತದ ಮಮ್ತಾಝ್ ಖಾನ್ ಗೋಲು ಜಮೆ ಮಾಡಿ 1-1 ಸಮಬಲ ಸಾಧಿಸಿದರು. 10ನೇ ನಿಮಿಷದಲ್ಲಿ ಅರ್ಜೆಂಟೀನದ ಸೊಫಿಯಾ ರಾಮಾಲ್ಲೊ ಗೋಲು ಜಮೆ ಮಾಡಿ 2-1 ಮುನ್ನಡೆ ಸಾಧಿಸಿದರು. ಪ್ರಥಮಾರ್ಧ ಕೊನೆಗೊಳ್ಳುವುದಕ್ಕಿಂತ ಸ್ವಲ್ಪ ಮೊದಲು ರೀಟಾ ಫೀಲ್ಡ್ ಗೋಲು ಬಾರಿಸಿ 2-2 ಸಮಬಲ ಸಾಧಿಸಿದರು.
ಬಳಿಕ ರೀಟಾ ಫೀಲ್ಡ್ ಗೋಲು ಬಾರಿಸಿ 2-2 ಸಮಬಲ ಸಾಧಿಸಿದರು. 1 ಸೋಫಿಯಾ (12ನೇ ನಿ.) , ಜೊಸೆಫಿನಾ ರುಬೆನಾಕೆರ್ (17ನೇ ನಿ,)ಮತ್ತು ಗಿಯಾನೆಲ್ಲಾ ಪಾಲೆಟ್ (19ನೇ ನಿ.) ಗೋಲು ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
Next Story