‘ಮೀಟೂ’: ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ
ಹೊಸದಿಲ್ಲಿ, ಅ.13: ‘ಮೀಟೂ’ ಆಂದೋಲನವು ಭಾರತದಲ್ಲಿ ದಿನೇ ದಿನೇ ಕಾವು ಪಡೆಯುತ್ತಿದ್ದು, ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ವಿರುದ್ಧ ಇದೀಗ ಲೈಂಗಿಕ ಕಿರುಕುಳ ಆರೋಪ ಮಾಡಲಾಗಿದೆ.
ಜೋಹ್ರಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತೆಯೊಬ್ಬರು ಆರೋಪಿಸಿರುವ ಸ್ಕ್ರೀನ್ ಶಾಟ್ ಗಳನ್ನು ಲೇಖಕಿ ಹರ್ನಿಧ್ ಕೌರ್ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ರಾಹುಲ್ ಜೋಹ್ರಿ 2016 ಎಪ್ರಿಲ್ ನಿಂದ ಬಿಸಿಸಿಐ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Next Story