ದ್ವಿತೀಯ ಸ್ಥಾನಕ್ಕೇರಿದ ಸಿಂಧು
ಬಿಡಬ್ಲ್ಯುಎಫ್ ರ್ಯಾಂಕಿಂಗ್
ಹೊಸದಿಲ್ಲಿ, ಅ.25: ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ವಿಜೇತ ಪಿ.ವಿ.ಸಿಂಧು ಗುರುವಾರ ಬಿಡುಗಡೆಯಾಗಿರುವ ಬಿಡಬ್ಲ್ಯುಎಫ್ ರ್ಯಾಂಕಿಂಗ್ನಲ್ಲಿ ಮತ್ತೊಮ್ಮೆ ದ್ವಿತೀಯ ಸ್ಥಾನ ಕಾಯ್ದುಕೊಂಡಿದ್ದಾರೆ.
ಸಿಂಧು ಈಗ ಪ್ಯಾರಿಸ್ನಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಚೈನೀಸ್ ತೈಪೆಯ ತೈ ಝು ಜಿಂಗ್ರನ್ನು ಹಿಂದಿಕ್ಕಿ ಒಂದು ಸ್ಥಾನ ಭಡ್ತಿ ಪಡೆದಿದ್ದಾರೆ. ಸಿಂಧು ಕಳೆದ ವರ್ಷದ ಎಪ್ರಿಲ್ನಲ್ಲಿ ಮೊದಲ ಬಾರಿ ವಿಶ್ವದ ನಂ.2ನೇ ಸ್ಥಾನಕ್ಕೇರಿದ್ದರು. ಸಿಂಧು ಸೆಪ್ಟಂಬರ್ನಿಂದ ನವೆಂಬರ್ ತನಕ ಸುಮಾರು 2 ತಿಂಗಳು ಮತ್ತೊಮ್ಮೆ 2ನೇ ಸ್ಥಾನ ಪಡೆದಿದ್ದರು. ಆ ನಂತರ 3ನೇ ಸ್ಥಾನಕ್ಕೆ ಕುಸಿದಿದ್ದ ಸಿಂಧು ಈ ವರ್ಷ ಹೆಚ್ಚಿನ ಸಮಯ ಇದೇ ಸ್ಥಾನದಲ್ಲಿದ್ದರು.
Next Story