ಪ್ರೊ ಕಬಡ್ಡಿ: ಡೆಲ್ಲಿ ಜಯಭೇರಿ
ಮುಂಬೈ, ನ.11: ಪ್ರೊ ಕಬಡ್ಡಿ ಲೀಗ್ನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ತಂಡ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು 40-29 ಅಂತರದಿಂದ ಮಣಿಸಿತು.
ವರ್ಲಿಯ ಎನ್ಎಸ್ಸಿಐ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ನವೀನ್ ಕುಮಾರ್(10 ಅಂಕ),ಮೀರಾಜ್ ಶೇಖ್(9 ಅಂಕ) ಹಾಗೂ ಚಂದ್ರನ್ ರಂಜಿತ್(8)ಡೆಲ್ಲಿ ಪರ ವೀರೋಚಿತ ಪ್ರದರ್ಶನ ನೀಡಿದರು. ಡೆಲ್ಲಿ ಪರ ಜೋಗಿಂದರ್ ನರ್ವಾಲ್(5)ಅಗ್ರ ಡಿಫೆಂಡರ್ ಎನಿಸಿಕೊಂಡರು.
Next Story