ಕಶ್ಯಪ್, ಸಾತ್ವಿಕ್- ಅಶ್ವಿನಿ ಗೆಲುವಿನ ಶುಭಾರಂಭ
ಹಾಂಕಾಂಗ್ ಓಪನ್
ಕಾವ್ಲಾನ್,ನ.13: ಹಾಂಕಾಂಗ್ ವರ್ಲ್ಡ್ ಟೂರ್ ಸೂಪರ್ 500 ಬ್ಯಾಡ್ಮಿಂಟನ್ಟೂರ್ನಮೆಂಟ್ ನಲ್ಲಿ ಮಾಜಿ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಪಾರುಪಳ್ಳಿ ಕಶ್ಯಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಜಯ ಗಳಿಸಿದ್ದಾರೆ.
ಇದೇ ವೇಳೆ ಮಿಕ್ಸೆಡ್ ಡಬಲ್ಸ್ನಲ್ಲಿ ಸಾತ್ವಿಕ್ಸಾಯ್ರಾಜ್ ರಾಂಕಿರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಗೆಲುವು ದಾಖಲಿಸಿದರು.
ಕೆಲವು ವರ್ಷಗಳಿಂದ ಗಾಯದ ಸಮಸ್ಯೆ ಎದುರಿಸುತ್ತಿರುವ ಕಶ್ಯಪ್ ಅವರು ಪುರುಷರ ಸಿಂಗಲ್ಸ್ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಚೈನಾ ತೈಪೆಯ ಸು ಜೆನ್ ಹಾವೊ ವಿರುದ್ಧ 21-7, 12-21, 21-18 ಅಂತರದಲ್ಲಿ ಗೆಲುವು ದಾಖಲಿಸಿದರು.
ಕಶ್ಯಪ್ ಮತ್ತು ಹಾವೊ ನಡುವಿನ ಹಣಾಹಣಿ ಒಂದು ಗಂಟೆ ಮತ್ತು 3 ನಿಮಿಷಗಳ ಕಾಲ ನಡೆಯಿತು.
ಪ್ರಥಮ ಸುತ್ತಿನ ಪಂದ್ಯದಲ್ಲಿ ಕಶ್ಯಪ್ ಅವರಿಗೆ ಇಂಡೋನೇಶ್ಯದ ಏಳನೇ ಶ್ರೇಯಾಂಕದ ಅಂಥೋನಿ ಸಿನಿಸುಕಾ ಗಿಂಟಿಂಗ್ ಸವಾಲು ಎದುರಾಗಲಿದೆ.
ಮಿಕ್ಸೆಡ್ ಡಬಲ್ಸ್ನಲ್ಲಿ ಸಾತ್ವಿಕ್ ಸಾಯ್ರಾಜ್ ಮತ್ತು ಅಶ್ವಿನಿ ಪೊನ್ನಪ್ಪ ಅವರು ಚೈನೀಸ್ ತೈಪೆಯ ವಾಂಗ್ ಚಿ ಲಿನ್ ಮತ್ತು ಲೀ ಯಾ ಸಿನ್ರನ್ನು ಪ್ರಥಮ ಸುತ್ತಿನ ಪಂದ್ಯದಲ್ಲಿ 21-16, 19-21, 21-14 ಅಂತರದಲ್ಲಿ ಮಣಿಸಿದರು.
ಮುಂದಿನ ಪಂದ್ಯದಲ್ಲಿ ಯಾಂಗ್ ಮತ್ತು ಸು ಯಾ ಚಿಂಗ್ ಸವಾಲನ್ನು ಸಾತ್ವಿಕ್ ಸಾಯ್ರಾಜ್ ಮತ್ತು ಅಶ್ವಿನಿ ಪೊನ್ನಪ್ಪ ಎದುರಿಸಲಿದ್ದಾರೆ. ವಿಶ್ವದ ಮಾಜಿ ನಂ.1 ಆಟಗಾರ ಕಶ್ಯಪ್ ಅವರು ಮೊಣಕಾಲಿನ ಗಾಯದ ಸಮಸ್ಯೆಯಿಂದಾಗಿ ಕಳೆದ ರಿಯೋ ಒಲಿಂಪಿಕ್ಸ್ ಗೇಮ್ಸ್ನಲ್ಲಿ ಆಡುವ ಅವಕಾಶದಿಂದ ವಂಚಿತಗೊಂಡಿದ್ದರು.
ಕಳೆದ ಆಸ್ಟ್ರೇಲಿಯನ್ ಓಪನ್ನಲ್ಲಿ ಆಡುವ ಮೂಲಕ ಸ್ಪರ್ಧಾತ್ಮಕ ಬ್ಯಾಡ್ಮಿಂಟನ್ಗೆ ವಾಪಸಾಗಿದ್ದರು.