ವನಿತೆಯರ ಟ್ವೆಂಟಿ-20 ವಿಶ್ವಕಪ್: ಭಾರತಕ್ಕೆ 52 ರನ್ಗಳ ಜಯ
ಪ್ರಾವಿಡೆನ್ಸ್(ಗಯಾನ), ನ.15: ವನಿತೆಯರ ಟ್ವೆಂಟಿ-20 ವಿಶ್ವಕಪ್ನ ‘ಬಿ’ ಗುಂಪಿನ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಭಾರತ 52 ರನ್ಗಳ ಜಯ ಗಳಿಸಿದೆ.
ಗೆಲುವಿಗೆ 146 ರನ್ಗಳ ಸವಾಲು ಪಡೆದ ಐರ್ಲೆಂಡ್ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 93ರನ್ ಗಳಿಸಿತು.
ಐರ್ಲೆಂಡ್ ತಂಡದ ಇಸೊಬೆಲ್ ಜೋಯ್ಸ (33) ಮತ್ತು ಶಿಲ್ಗಾಂಟನ್ (23) ಗರಿಷ್ಠ ಸ್ಕೋರ್ ದಾಖಲಿಸಿದರು. ಭಾರತ ಈ ಗೆಲುವಿನೊಂದಿಗೆ ಹ್ಯಾಟ್ರಿಕ್ ಜಯ ದಾಖಲಿಸಿದೆ. ಭಾರತ 145/6: ಭಾರತ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 145 ರನ್ ಗಳಿಸಿತ್ತು.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ ತಂಡ ಆರಂಭಿಕ ಆಟಗಾರ್ತಿ ಮಿಥಾಲಿ ರಾಜ್ ಅರ್ಧಶತಕ ನೆರವಿನಲ್ಲಿ ಉತ್ತಮ ಮೊತ್ತ ದಾಖಲಿಸಿತು.
ಮಿಥಾಲಿ ರಾಜ್ 51 ರನ್(56ಎ, 4ಬೌ,1ಸಿ), ಸ್ಮತಿ ಮಂಧಾನ(33), ಜೆಮೀಮಾ ರೋಡ್ರಿಗಸ್(18), ದೀಪ್ತಿ ಶರ್ಮಾ(11) ಎರಡಂಕೆಯ ಸ್ಕೋರ್ ದಾಖಲಿಸಿದರು.
Next Story